ಕುಂದಾಪುರದಿಂದ ಪ್ಯಾನ್-ಇಂಡಿಯಾ ಸ್ಟಾರ್‌ವರೆಗೆ
ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್, ಆರಂಭದ ದಿನಗಳಲ್ಲಿ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ನೀರಿನ ಬಿಜಿನೆಸ್, ಹೋಟೆಲ್ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಇಂದು ತಮ್ಮ ಕಠಿಣ ಪರಿಶ್ರಮದಿಂದ ಇಡೀ ದೇಶವೇ ತಿರುಗಿ ನೋಡುವಂತಹ ತಾರೆಯಾಗಿ ಬೆಳೆದು ನಿಂತಿದ್ದಾರೆ.