ಗ್ಲಾಮರಸ್​ ರಿಧಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರಸ್​ ರಿಧಿ

ನಟ ಪ್ರಭಾಸ್​ ನಟನೆಯ ರಾಜಾ ಸಾಬ್​ ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕವೇ ಎಲ್ಲರ ಗಮನ ಸೆಳೆದಿರುವ ಬೋಲ್ಡ್​ ನಟಿ ರಿಧಿ ಕುಮಾರ್ ಅವರ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.​

ಮಹಾರಾಷ್ಟ್ರ ಸುಂದರಿ

ರಿಧಿ ಅವರು ಮಹಾರಾಷ್ಟ್ರದ ಶಿರಡಿ ಸಮೀಪದ ಕೋಪರ್ಗಾಂವ್‌ನಲ್ಲಿ ಜನಿಸಿದರು. ಭಾರತೀಯ ಸೇನೆಯ ಅಧಿಕಾರಿಯ ಪುತ್ರಿ ಆಗಿದ್ದು, ಸೇನಾ ಕುಟುಂಬದಲ್ಲಿ ಬೆಳೆದಿದ್ದಾರೆ.

ಮಾಡೆಲಿಂಗ್​

ರಿಧಿ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಫಿಲಾಸಫಿ (ತತ್ವಶಾಸ್ತ್ರ) ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ನೀಡುವ ಮುನ್ನ ಮಾಡೆಲ್ ಆಗಿ ಕೆಲಸ ಮಾಡಿದರು. 2015ರಲ್ಲಿ Citadel Miss Pune ಮತ್ತು 2016ರಲ್ಲಿ Face of India ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಸಿನಿಮಾ ಎಂಟ್ರಿ

2018ರಲ್ಲಿ ತೆಲುಗು ಚಿತ್ರ ಲವರ್​ ಮೂಲಕ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ರಿಧಿ ಗಮನ ಸೆಳೆದರು.

ಬಹುಭಾಷಾ ನಟಿ

ಹಿಂದಿ, ತೆಲುಗು, ಮರಾಠಿ ಮತ್ತು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂನಲ್ಲಿ ಪ್ರಣಯ ಮೀನುಕಲುದೆ ಕಡಲ್​, ಮರಾಠಿಯಲ್ಲಿ ಕಧಿಪಟ್ಟ ಮತ್ತು ಸೂಪರ್​ಬಾಯ್ಸ್​ ಆಫ್​ ಮಾಲೇಂಗಾವ್​ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಮುಖ ಚಿತ್ರಗಳು

ರಿಧಿ ನಟಿಸಿದ ಪ್ರಮುಖ ಸಿನಿಮಾಗಳೆಂದರೆ, ರಾಧೆ ಶ್ಯಾಮ್​, ದಿ ರಾಜಾ ಸಾಬ್​, ಕ್ಯಾಂಡಿ (ವೆಬ್ ಸೀರೀಸ್), ಹ್ಯೂಮನ್​, ಸಲಾಂ ವೆಂಕಿ ಮತ್ತು ಕ್ರ್ಯಾಶ್​ ಕೋರ್ಸ್​ ಮುಂತಾದವುಗಳಲ್ಲಿ ನಟಿಸಿದ್ದಾರೆ.

ರಾಜಾ ಸಾಬ್​ ಮೂಲಕ ಖ್ಯಾತಿ

ದಿ ರಾಜಾ ಸಾಬ್​ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ನಟಿಸುವ ಮೂಲಕ ರಿಧಿ ಹೆಚ್ಚು ಗಮನ ಸೆಳೆದಿದ್ದಾರೆ. ಇದಲ್ಲದೆ ಆಕೆ ತತ್ವಶಾಸ್ತ್ರದ ಆಸಕ್ತಿ ಹೊಂದಿದ್ದು, ಸ್ವತಂತ್ರ ಮಹಿಳೆಯಾಗಿ ತನ್ನನ್ನು ನಿರೂಪಿಸುವುದರ ಬಗ್ಗೆ ಮಾತನಾಡುತ್ತಾರೆ.

ಹಾಟ್​ ಫೋಟೋಸ್​

ತಮ್ಮ ಇನ್​ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿರುವ ರಿಧಿ, ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ನೇರಳೆ ಬಣ್ಣದ ಲೆಹಂಗಾ ಧರಿಸಿರುವ ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪಡ್ಡೆ ಹುಡುಗರು ಫಿದಾ

ರಿಧಿ ಹಂಚಿಕೊಂಡಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿವೆ. ತನ್ನ ಮೈಮಾಟ ಕಾಣುವಂತಹ ಸ್ಲೀವ್​ಲೆಸ್​ ಲೆಹಂಗಾದಲ್ಲಿ ರಿಧಿಯ ಸೌಂದರ್ಯ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.