ಬೋಲ್ಡ್​ ಅವತಾರದಲ್ಲಿ ಸೂರ್ಯಕಾಂತಿ ಸುಂದರಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೋಲ್ಡ್​ ಅವತಾರದಲ್ಲಿ ಸೂರ್ಯಕಾಂತಿ ಸುಂದರಿ!

ಬಹುಭಾಷಾ ನಟಿ ರೆಜಿನಾ ಕ್ಯಾಸ್ಸಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಇತ್ತೀಚೆಗೆ ಹಂಚಿಕೊಂಡಿರುವ ಗ್ಲಾಮರಸ್ ಫೋಟೋಶೂಟ್ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆದ ನೀಲಿ ಉಡುಪಿನ ಲುಕ್

ರೆಜಿನಾ ಕ್ಯಾಸ್ಸಂದ್ರ ಅವರು ಹಂಚಿಕೊಂಡಿರುವ ಇತ್ತೀಚಿನ ಫೋಟೋಶೂಟ್‌ನಲ್ಲಿ ಆಕರ್ಷಕವಾದ ತಿಳಿ ನೀಲಿ ಬಣ್ಣದ ಸೈಡ್-ಸ್ಲಿಟ್ ಗೌನ್ ಧರಿಸಿ ಮಿಂಚಿದ್ದಾರೆ. ಅವರ ಸ್ಟೈಲಿಶ್ ಮತ್ತು ಬೋಲ್ಡ್ ಲುಕ್ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೆಟ್ಟಿಗರ ಮೆಚ್ಚುಗೆ

ರೆಜಿನಾ ಅವರ ಈ ನೀಲಿ ಉಡುಪಿನ ಫೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದು, ರೆಜಿನಾ ತುಂಬಾ ಸ್ಟನ್ನಿಂಗ್ ಮತ್ತು ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ ಎಂದು ಕಮೆಂಟ್‌ಗಳ ಮೂಲಕ ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ.

ಫೋಟೋದ ವಿನ್ಯಾಸ

ವೈರಲ್​ ಫೋಟೋದಲ್ಲಿ ರೆಜಿನಾ ಅವರು ಬ್ಯಾಕ್‌ಲೈಟ್ ಬೆಳಕಿನ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯುವಂತೆ ಪೋಸ್ ನೀಡಿದ್ದು, ಫೋಟೋದ ಸುತ್ತಲೂ ನಕ್ಷತ್ರಗಳ ವಿನ್ಯಾಸವಿರುವ ಆಕರ್ಷಕ ಬಾರ್ಡರ್ ನೀಡಲಾಗಿದೆ. ಇದು ಅವರ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ.

ಬಹುಭಾಷಾ ನಟಿ

ರೆಜಿನಾ ಕ್ಯಾಸ್ಸಂದ್ರ ಅವರು ಕೇವಲ ಒಂದು ಚಿತ್ರರಂಗಕ್ಕೆ ಸೀಮಿತವಾಗದೆ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಮುಖ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಕನ್ನಡ ಸಿನಿಪ್ರಿಯರಿಗೆ ಚಿರಪರಿಚಿತ

ಕನ್ನಡದಲ್ಲಿ ನಟ ಚೇತನ್​ ಅಹಿಂಸ ಅಭಿಯನದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸುವ ಮೂಲಕ ರೆಜಿನಾ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ವೆಬ್ ಸೀರೀಸ್‌ಗಳಲ್ಲೂ ಯಶಸ್ಸು

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಒಟಿಟಿ ಲೋಕದಲ್ಲೂ ರೆಜಿನಾ ತಮ್ಮ ಛಾಪು ಮೂಡಿಸಿದ್ದಾರೆ. ಹಿಂದಿಯ ಪ್ರಸಿದ್ಧ 'ರಾಕೆಟ್ ಬಾಯ್ಸ್' ಸೇರಿದಂತೆ ಹಲವು ವೆಬ್ ಸೀರೀಸ್‌ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.