ಕೆಂಪು ಸುಂದರಿ ಪೂಜಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೆಂಪು ಸುಂದರಿ ಪೂಜಾ!

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ನ್ಯೂಯಾರ್ಕ್ ಪ್ರವಾಸದ ವೇಳೆ ಕೆಂಪು ಧಿರಿಸಿನಲ್ಲಿ ಸೆರೆಹಿಡಿದಂತಹ ಆಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಮಾಡರ್ನ್ ಸೀರೆ

ಪೂಜಾ ಹೆಗ್ಡೆ ಅವರು ಹೊಳೆಯುವ ಸೆಕ್ವಿನ್ಸ್‌ಗಳು ಮತ್ತು ಮಿರರ್ ಕಸೂತಿ ಇರುವ ಗಾಢ ಕೆಂಪು ಬಣ್ಣದ ಸ್ಟ್ರಾಪ್‌ಲೆಸ್ ಬ್ಲೌಸ್ ಹಾಗೂ ಮಾಡರ್ನ್ ಸೀರೆ ಶೈಲಿಯ ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಸ್ಟೈಲಿಶ್ ಲುಕ್

ಸೀರೆಯಲ್ಲಿ ಗ್ಲಾಮರಸ್ ಲುಕ್‌ಗೆ ತಕ್ಕಂತೆ ಕೂದಲನ್ನು ಅಲೆಅಲೆಯಾಗಿ ಬಿಟ್ಟಿದ್ದು, ಸ್ಟೇಟ್‌ಮೆಂಟ್ ಗೋಲ್ಡ್ ಇಯರಿಂಗ್ಸ್‌ಗಳು ಮತ್ತು ಕೈಯಲ್ಲಿ ಬಳೆಗಳನ್ನು ಧರಿಸಿ ಸ್ಟೈಲಿಶ್​ ಲುಕ್​ ನೀಡಿದ್ದಾರೆ.

ಫೋಟೋಶೂಟ್ ಹಿನ್ನೆಲೆ

ಚಿನ್ನದ ಬಣ್ಣದ ಮೆಟ್ಟಿಲುಗಳ ಬಳಿ ನಿಂತು ಪೂಜಾ ಹೆಗ್ಡೆ ಅತ್ಯಂತ ಸೊಬಗು ಮತ್ತು ಆತ್ಮವಿಶ್ವಾಸದಿಂದ ಫೋಸ್ ನೀಡಿರುವ ಚಿತ್ರಗಳು ವೈರಲ್ ಆಗಿವೆ.

ನ್ಯೂಯಾರ್ಕ್ ಪ್ರವಾಸದ ಚಿತ್ರಗಳು

ಅಂದಹಾಗೆ, ಈ ಸುಂದರವಾದ ಫೋಟೋಗಳು ಪೂಜಾ ಅವರ ನ್ಯೂಯಾರ್ಕ್ ಪ್ರವಾಸಕ್ಕೆ ಸಂಬಂಧಿಸಿದವುಗಳಾಗಿವೆ.

ಗೌರವಾರ್ಹ ಅತಿಥಿ

ಪೂಜಾ ಹೆಗ್ಡೆ ಅವರು ನ್ಯೂಯಾರ್ಕ್‌ನಲ್ಲಿ ನಡೆದ 'ಇಂಡಿಯಾ ಡೇ ಪೆರೇಡ್' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವಿಶೇಷ ಸನ್ಮಾನಈ ಪ್ರವಾಸದ ವೇಳೆ ಅವರನ್ನು ನ್ಯೂಯಾರ್ಕ್‌ನ ಸಾರ್ವಜನಿಕ ವಕ್ತಾರರು ಆತ್ಮೀಯವಾಗಿ ಗೌರವಿಸಿದ್ದಾರೆ.

ಈ ಪ್ರವಾಸದ ವೇಳೆ ಅವರನ್ನು ನ್ಯೂಯಾರ್ಕ್‌ನ ಸಾರ್ವಜನಿಕ ವಕ್ತಾರರು ಆತ್ಮೀಯವಾಗಿ ಗೌರವಿಸಿದ್ದಾರೆ.