ಲಖನೌ: ಪುಸ್ತಕ ಜ್ಞಾನದ ಜೊತೆಗೆ ಲೋಕದ ಜ್ಞಾನವು ಮುಖ್ಯ ಎಂದು ಮನಗಂಡಿರುವ ಉತ್ತರ ಪ್ರದೇಶ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದೆ..ಮೊಬೈಲ್ ಫೋನ್ ಸೇರಿದಂತೆ ಇತರ ಡಿಜಿಟಲ್ ಮಾಯಾಜಾಲದಿಂದ ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ..ಪ್ರತಿದಿನ ಬೆಳಿಗ್ಗೆ ಶಾಲಾ ಸಭೆಯಲ್ಲಿ ಪತ್ರಿಕೆ ಓದಲು 10 ನಿಮಿಷಗಳ ಸಮಯವನ್ನು ನಿರ್ದಿಷ್ಟವಾಗಿ ನಿಗದಿಪಡಿಸಬೇಕು.ನಿಯಮಿತವಾಗಿ ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು..ಸಂಪಾದಕೀಯಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಶಬ್ದಕೋಶವನ್ನು ಸುಧಾರಿಸುವುದಲ್ಲದೆ, ಅವರ ಬರವಣಿಗೆಯ ಕೌಶಲ್ಯವನ್ನು ಸಹ ಹೆಚ್ಚಿಸುತ್ತದೆ.