ರಶ್ಮಿಕಾ ಪ್ರೀ ವೆಡ್ಡಿಂಗ್​ ಬ್ಯಾಚುಲರ್​ ಟ್ರಿಪ್​?

ಭೂಮಿಕಾ ವಿ. ನಾಥ್​​​

ರಶ್ಮಿಕಾ ಪ್ರೀ ವೆಡ್ಡಿಂಗ್​ ಬ್ಯಾಚುಲರ್​ ಟ್ರಿಪ್​?

ಸಿನಿಮಾಗಳಿಂದ ಬಿಡುವು ಪಡೆದುಕೊಂಡಿರುವ ರಶ್ಮಿಕಾ ಇದೀಗ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

ಪ್ರೀ ವೆಡ್ಡಿಂಗ್​ ಬ್ಯಾಚುಲರ್​ ಟ್ರಿಪ್​

ಇದು ಕೇವಲ ವಿರಾಮವಲ್ಲ, ಬಹುಶಃ ಬ್ಯಾಚಿಲರೆಟ್ ಪ್ರವಾಸವೂ ಆಗಿರಬಹುದು ಎಂದು ಕೆಲವು ಅಭಿಮಾನಿಗಳು ಊಹಿಸುತ್ತಿದ್ದಾರೆ. ಏಕೆಂದರೆ, 2026, ಫೆಬ್ರವರಿ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ವಿವಾಹದ ಬಗ್ಗೆ ಈಗಾಗಲೇ ವದಂತಿಗಳು ಹರಡಿವೆ.

ರಶ್ಮಿಕಾ ಜತೆ ನಟಿ ವರ್ಷಾ ಬೊಲ್ಲಮ್ಮ

ರಶ್ಮಿಕಾ ಜತೆ ನಟಿ ವರ್ಷಾ ಬೊಲ್ಲಮ್ಮ ಕೂಡ ಇದಾರೆ. ಅಲ್ಲದೆ, ಅವರೊಂದಿಗೆ ಇನ್ನಿತರ ಗೆಳತಿಯರು ಕೂಡ ಇದಾರೆ.

ಬೀಚ್​ನಲ್ಲಿ ಸಮಯ ಕಳೆಯುತ್ತಿರುವುದು

ರಶ್ಮಿಕಾ ಹಂಚಿಕೊಂಡಿರುವ ಸಾಕಷ್ಟು ಫೋಟೋಗಳಲ್ಲಿ ಬೀಚ್​ನಲ್ಲಿ ಸಮಯ ಕಳೆಯುತ್ತಿರುವುದು, ಎಳನೀರು ನೀರು ಕುಡಿಯುತ್ತಿರುವುದು, ತನ್ನ ಸ್ನೇಹಿತರೊಂದಿಗೆ ನಗುತ್ತಾ ಮೋಜು ಮಾಡುತ್ತಿರುವುದು ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯಗಳಿವೆ.

ವೈಯಕ್ತಿಕ ಜೀವನದಲ್ಲಿ ಗೌಪ್ಯತೆ

ಸದ್ಯ ರಶ್ಮಿಕಾ ಅವರ ಪ್ರವಾಸ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಸಾರ್ವಜನಿಕರಿಂದ ದೂರವಿಡಲು ಬಯಸುತ್ತಾರೆ.