ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಇತ್ತೀಚಿನ ಗ್ಲಾಮರಸ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಗಮನ ಸೆಳೆಯುತ್ತಿದ್ದಾರೆ.
ಓಲ್ಡ್ ಮನಿ ಗ್ಲಾಮರ್
ಲಿಯೋಪಾರ್ಡ್ ಪ್ರಿಂಟ್ ಸೀಕ್ವಿನ್ ಗೌನ್ ಹಾಗೂ ಥೈ-ಹೈ ಸ್ಲಿಟ್ ಉಡುಪಿನಲ್ಲಿ ರಕುಲ್ ಹಳೆಯ ಕಾಲದ ಶ್ರೀಮಂತಿಕೆಯ (ಓಲ್ಡ್ ಮನಿ ಗ್ಲಾಮರ್) ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಲೆಪರ್ಡ್ ಪ್ರಿಂಟ್ ಡ್ರೆಸ್
ಸುಂದರವಾದ ಲೆಪರ್ಡ್ ಪ್ರಿಂಟ್ ಡ್ರೆಸ್ ಧರಿಸಿ, ಬಹುಮಾನ ಟ್ರೋಫಿಯನ್ನು ಹಿಡಿದುಕೊಂಡು ಒಂದು ದೊಡ್ಡ ಮೆಟಾಲಿಕ್ ಕುರ್ಚಿಯಲ್ಲಿ ಕುಳಿತಿದ್ದು, ಸುತ್ತಲೂ ಹೂವುಗಳು, ಮೇಣದಬತ್ತಿಗಳು ಮತ್ತು ಅಲಂಕಾರಗಳಿಂದ ಕೂಡಿದ ವೇದಿಕೆ ಫೋಟೋ ಹೊಸ ಲುಕ್ ನೀಡಿದೆ.
ಐಷಾರಾಮಿ ಮೆಟ್ಟಿಲುಗಳ ಮೇಲೆ ಪೋಸ್
ಹೈ-ಸ್ಲಿಟ್ ಗೌನ್ ಧರಿಸಿ, ಐಷಾರಾಮಿ ಮೆಟ್ಟಿಲುಗಳ ಮೇಲೆ ನಿಂತು ಸೊಗಸಾಗಿ ಪೋಸ್ ನೀಡುತ್ತಿರುವ ಈ ಫೋಟೋ ಅವರ ಗ್ಲಾಮರಸ್ ಲುಕ್ ಅನ್ನು ಸುಂದರವಾಗಿ ತೋರಿಸುತ್ತದೆ.
ದೆಹಲಿ ಸುಂದರಿ
ರಾಕುಲ್ ಅವರು 1990, ಅಕ್ಟೋಬರ್ 10ರಂದು ನವದೆಹಲಿಯಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದರು ಮತ್ತು ಗಣಿತದಲ್ಲಿ ಡಿಗ್ರಿ ಪಡೆದಿದ್ದಾರೆ.
ಸ್ಯಾಂಡಲ್ವುಡ್ ಮೂಲಕ ಸಿನಿ ಎಂಟ್ರಿ
ಸ್ಯಾಂಡಲ್ವುಡ್ನಲ್ಲಿ 2009ರಲ್ಲಿ ತೆರೆಕಂಡ ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ಗಿಲ್ಲಿ ಸಿನಿಮಾ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಸದ್ಯ ತೆಲುಗು, ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತಿದ್ದಾರೆ.
ಬಾಲಿವುಡ್ ಎಂಟ್ರಿ
ಯಾರಿಯಾನ್ (2014) ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಸರ್ರೈನೋಡು, ನನ್ನಕು ಪ್ರೇಮತೋ ಮುಂತಾದ ಯಶಸ್ವಿ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ವೈವಾಹಿಕ ಜೀವನ
2024, ಫೆಬ್ರವರಿ 21ರಂದು ಗೋವಾದಲ್ಲಿ ನಟ-ನಿರ್ಮಾಪಕ ಜ್ಯಾಕಿ ಭಗ್ನಾನಿ ಅವರನ್ನು ವಿವಾಹವಾಗಿದ್ದು, ದಾಂಪತ್ಯ ಜೀವನದ ಜತೆಗೆ ಸಿನಿಮಾಗಳಲ್ಲೂ ಬಿಜಿಯಾಗಿದ್ದಾರೆ.
ಶೂರ್ಪನಕಿಯಾದ ರಾಕುಲ್
ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟಿಸಿರುವ ಸಿನಿ ಜಗತ್ತಿನ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದಲ್ಲಿ ರಾಕುಲ್ 'ಶೂರ್ಪನಕಿ' ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ನವೆಂಬರ್ 6ಕ್ಕೆ ಬಿಡುಗಡೆಯಾಗಲಿದೆ.