ಪತಿ ಪತ್ನಿ ಔರ್ ದೋ ಸಿನಿಮಾ ಮೇ.15ರಂದು ರಿಲೀಸ್ ಆಗುತ್ತಿರುವ ಹಿನ್ನೆಲೆ ಸಿನಿಮಾದಲ್ಲಿ ನಟಿಸಿರುವ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಆಯುಷ್ಮಾನ್ ಖುರಾನಾ ಮತ್ತು ವಾಮಿಕಾ ಗಬ್ಬಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಪತಿ ಪತ್ನಿ ಔರ್ ದೋ ಸಿನಿಮಾ ಪ್ರಚಾರ
ಪತಿ ಪತ್ನಿ ಔರ್ ದೋ ಚಾರ ಕಾರ್ಯಕ್ರಮದಲ್ಲಿ ರಕುಲ್ ಪ್ರೀತ್ ಸಿಂಗ್ ಧರಿಸಿದ್ದ ಫ್ರಾಕ್ನಂತಿದ್ದ ವೈಟ್ ಗೌನ್ಗೆ ಕೆಂಪು ಗುಲಾಬಿ ನೋಡುಗರನ್ನು ಸೆಳೆಯಿತು. ಇಷ್ಟೇ ಅಲ್ಲದೆ, ಅದಕ್ಕೆ ತಕ್ಕಂತೆ ಧರಿಸಿದ್ದ ಕಿವಿಯೋಲೆ, ಸಿಂಪಲ್ ಮೇಕಪ್ಗೆ ಅಬಿಮಾನಿಗಳು ಫಿದಾ ಆಗಿದ್ದಾರೆ.
ಏಂಜೆಲ್ನಂತೆ ಕಂಡ ರಕುಲ್
ಸಿನಿಮಾ ಪ್ರಚಾರದ ಮಧ್ಯೆ ಅದೇ ಉಡುಪಿನಲ್ಲಿ ಮಾಡಿಸಿಕೊಂಡಿರುವ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಕೊಟ್ಟಿರುವ ಆಕರ್ಷಕ ಪೋಸ್ಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿವೆ. ಫೋಟೋಶೂಟ್ನಲ್ಲಿ ಅವರ ಆತ್ಮ ವಿಶ್ವಾಸ ಮತ್ತು ಸ್ಟೈಲ್ ಪ್ರತಿಯೊಂದು ಫೋಟೋದಲ್ಲಿ ಎದ್ದುಕಾಣುತ್ತಿದೆ.
ಕನ್ನಡದಲ್ಲಿ ನಟನೆ
ಜಗ್ಗೇಶ್ ಪುತ್ರ ನಟಿಸಿರುವ ಗಿಲ್ಲಿ ಸಿನಿಮಾದಲ್ಲಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಸಿನಿಮಾದ ಕಣ್ಣಿನ ಭಾಷೆ ತಿಳಿಯುವುದೇ ಭಾರಿ ವೈರಲ್ ಆಗಿತ್ತು. 2009ರಲ್ಲಿ ಅವರು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸದ್ಯ ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದಾರೆ.
ದಾಂಪತ್ಯ ಜೀವನ ಹೀಗಿದೆ..
ರಕುಲ್ ಪ್ರೀತ್ ಸಿಂಗ್ ಪ್ರೀತ್ ನಟಿ ಮಾತ್ರವಲ್ಲ. ಅವರು ಮಾಡೆಲ್ ದೆಹಲಿಯಲ್ಲಿ ಜನಿಸಿದ ಇವರು ಮೂಲತಃ ಪಂಜಾಬಿ. 2025ರಲ್ಲಿ ನಟ-ನಿರ್ಮಾಪಕ ಜಾಕಕಿ ಭಗ್ನಾನಿ ಜೊತೆಗೆ ಮದುವೆ ಮಾಡಿಕೊಂಡರು.
ರಕುಲ್ ಪ್ರೀತ್ ಸಿಂಗ್ ಸಿನಿಮಾಗಳಿವು..
ನಾನಕು ಪ್ರೇಮತೋ, ಜಯ ಜಾನಕಿ ನಾಯಕ, ಸರೈನೋಡು, ಧ್ರುವ, ವೆಂಕಟಾದ್ರಿ ಎಕ್ಸ್ಪ್ರೆಸ್ ಇವರ ಹಿಟ್ ಸಿನಿಮಾಗಳು. ಸದ್ಯ ಪತಿ ಪತ್ನಿ ಔರ್ ದೋ ರಿಲೀಸಿಂಗ್ ಲಿಸ್ಟ್ನಲ್ಲಿ ಇದೆ.