ಮಾಲಿವುಡ್ ತಾರೆ ರಜಿಷಾ ವಿಜಯನ್ ಅವರ ಐಟಂ ಸಾಂಗ್ ಈಗ ಮಲಯಾಳಂನಲ್ಲಿ ಇದೀಗ ಹಾಟ್ ಟಾಪಿಕ್ ಆಗಿದೆ.
ಸುದ್ದಿಯಲ್ಲಿದ್ದಾರೆ ರೆಜಿಷಾ
ಮಸ್ತಿಷ್ಕ ಮಿರಿಯಂ ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಬಳುಕಿಸಿದ ಬಳಿಕ ರೆಜಿಷಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈವರೆಗೆ ಮುಗ್ಧ ಮತ್ತು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಮೈಮಾಟ ಪ್ರದರ್ಶನ
ತಮ್ಮ ಅದ್ಭುತ ಅಭಿನಯದಿಂದಲೇ ಸುದ್ದಿಯಾಗುತ್ತಿದ್ದ ರೆಜಿಷಾ, ಇದೀಗ ತಮ್ಮ ಮೈಮಾಟ ಪ್ರದರ್ಶಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
ಹಿಂದಿನ ವಿಡಿಯೋ ತುಣುಕು
ಹಿಂದಿನ ಸಂದರ್ಶನವೊಂದರಲ್ಲಿ, ಐಟಂ ಹಾಡುಗಳನ್ನು ಮಾಡಲು ನನಗೆ ಆಸಕ್ತಿ ಇಲ್ಲ ಮತ್ತು ನನ್ನ ದೇಹವನ್ನು ಒಂದು ವಸ್ತುವಾಗಿ ನೋಡಬಾರದು ಎಂದು ಹೇಳಿಕೆ ನೀಡಿದ್ದರು.
ಟ್ರೋಲ್ಗೆ ಗುರಿಯಾದ ರೆಜಿಷಾ
ಆ ಸಂದರ್ಶನದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ರೆಜಿಷಾ ಅವರನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.
ರೆಜಿಷಾ ಪರ ಬ್ಯಾಟಿಂಗ್
ಕಥೆಗೆ ಅಗತ್ಯವಿದ್ದರೆ ಐಟಂ ಸಾಂಗ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಲವರು ರೆಜಿಷಾ ಅವರ ಪರ ಬ್ಯಾಟ್ ಬೀಸಿದ್ದಾರೆ.
ಮಾಲಿವುಡ್ ಮತ್ತು ಕಾಲಿವುಡ್‌ಗೆ ಸೀಮಿತ
2016 ರಲ್ಲಿ ಸಿನಿ ಉದ್ಯಮಕ್ಕೆ ಕಾಲಿಟ್ಟ ರಜಿಷಾ, ಕರ್ಣನ್ ಚಿತ್ರದೊಂದಿಗೆ ಎಲ್ಲರ ಗಮನ ಸೆಳೆದರು. ಅವರು ಮಾಲಿವುಡ್ ಮತ್ತು ಕಾಲಿವುಡ್‌ಗೆ ಮಾತ್ರ ಸೀಮಿತರಾಗಿದ್ದಾರೆ.