ಮೊದಲು ಸ್ನೇಹಿತೆ, ಇದೀಗ ಮಡದಿ
ರಘು ಮತ್ತು ವಾರಿಜಾ ಇಬ್ಬರೂ ಸಂಗೀತ ಕ್ಷೇತ್ರ ಹಿನ್ನೆಲೆಯವರಾದ್ದರಿಂದ ಆರಂಭದ ಪರಿಚಯ, ಸ್ನೇಹಕ್ಕೆ ತಿರುಗಿ, ನಂತರದಲ್ಲಿ ಪ್ರೀತಿಗೆ ಬದಲಾಗಿ, ಇದೀಗ ವೈವಾಹಿಕ ಸಂಬಂಧದೊಂದಿಗೆ ಗಟ್ಟಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ರಘು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಾರಿಜಾಶ್ರೀ ಅವರ ಗ್ರಾಮಿ ನಾಮಿನೇಶನ್ ಅನ್ನು ಅಭಿನಂದಿಸಿ 'ಸ್ನೇಹಿತೆ' ಎಂದು ಉಲ್ಲೇಖಿಸಿದ್ದರು. ಇದಾದ ಕೆಲವೇ ತಿಂಗಳಲ್ಲಿ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಮದುವೆ ಮೂಲಕ ಅಧಿಕೃತವಾಗಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ.