'ಹೆಂಗೆ ನಾವು'

ಮಮತಾ

'ಹೆಂಗೆ ನಾವು'

ತೀರ್ಥ ರೂಪ ತಂದೆವರಿಗೆ ಸಿನಿಮಾ ನಂತರ ಹೊಸ ಚಿತ್ರದ ಅಪಡೇಟ್​ ಕೊಡದ ಲವ್​ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್​ ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಆಕ್ಟೀವ್ ಇದ್ದಾರೆ. ಪ್ರವಾಸಿ ಮೋಡ್​ನಲ್ಲಿ ಇರುವ ಅವರು ಸುತ್ತಾಟದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಬ್ಯೂಟಿಫುಲ್ ರಚನಾ

ಬಿಳಿ ಗೌನ್​ ಧರಿಸಿ, ಕೈಯಲ್ಲಿ ಹೂ ಹಿಡಿದು ಕೊಟ್ಟಿರುವ ಪೋಸ್​ಗಳ ಫೋಟೋವನ್ನು ರಚನಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕವರ ಫ್ಯಾನ್ಸ್ ರೇಡಿಯಂಟ್​ ಸ್ಮೈಲ್​ ಆಂಡ್​ ಸ್ಟೈಲ್​, ಬ್ಯೂಟಿಫುಲ್​ ಎನ್ನುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.

ಲವ್​ ಮಾಕ್ಟೇಲ್ ರಚನಾ

ಲವ್​ ಮಾಕ್ಟೇಲ್​ ಸಿನಿಮಾದಿಂದ ಪರಿಚಯವಾದ ರಚನಾ ಅವರು ಹೆಂಗೆ ನಾವು ಎನ್ನುವುದಕ್ಕೆ ಫೇಮಸ್​ ಆದರು. ಅವರ ಮಾತಿನ ಶೈಲಿ ಪಡ್ಡೆ ಹುಡುಗರ ಮನ ಗೆದ್ದಿತ್ತು.

ರಚನಾ ನಟಿಸಿದ ಸಿನಿಮಾಗಳಿವು

ಚಿತ್ತಮ್​ ಮಹಾರಾಣಿ, ಫ್ರೀ ಫ್ಲೈ, ಲವ್​ ಮಾಕ್​ಟೇಲ್​2, ತ್ರಿಬಲ್​ ರೈಡಿಂಗ್​, ಹರಿಕತೆಯಲ್ಲ ಗಿರಿಕತೆ, ನಾನು ಮತ್ತು ಗುಂಡ, ತೀರ್ಥ ರೂಪ ತಂದೆಯವರಿಗೆ ಸಿನಿಮಾದಲ್ಲಿ ರಚನಾ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದರು.

ಕೊಡಗಿನ ಕುವರಿ ರಚನಾ

ಎಂಬಿಎ ಪದವಿ ಪಡೆದಿರುವ ರಚನೆ ಕೊಡಗಿನವರು. ನಟಿ ಹಾಗೂ ಮಾಡೆಲ್​ ಆಗಿ ಸಕ್ರಿಯರಾಗಿದ್ದಾರೆ.