ಬಹುಭಾಷಾ ನಟಿ ರಾಶಿ ಖನ್ನಾ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ದೆಹಲಿ ಸುಂದರಿ
ರಾಶಿ ಖನ್ನಾ ಅವರು 1990, ನವೆಂಬರ್ 30ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಿಸಿದರು. ಪ್ರಸ್ತುತ ಅವರ ವಯಸ್ಸು 35 ವರ್ಷ.
ಶಿಕ್ಷಣ
ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್‌ನಲ್ಲಿ ಇಂಗ್ಲಿಷ್‌ನಲ್ಲಿ BA (ಆನರ್ಸ್) ಪದವಿ ಪಡೆದಿದ್ದಾರೆ. ಶಾಲಾ ಶಿಕ್ಷಣ ಸಹ ದೆಹಲಿಯಲ್ಲೇ ಪೂರ್ಣಗೊಳಿಸಿದರು.
ಚಿತ್ರರಂಗ ಪ್ರವೇಶ
2013ರಲ್ಲಿ ಬಾಲಿವುಡ್ ಚಿತ್ರ ಮದ್ರಾಸ್ ಕೆಫೆಯಲ್ಲಿ ಪೋಷಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ತೆಲುಗಿನ ಊಹಲು ಗುಸಗುಸಲಾಡೆ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು.
ಬಹುಭಾಷಾ ನಟಿ
ಮುಖ್ಯವಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ರಾಶಿ ಬಿಜಿಯಾಗಿದ್ದಾರೆ. ಹಿಂದಿ ಚಿತ್ರಗಳಲ್ಲೂ (Yodha, 120 Bahadur ಮುಂತಾದವು) ಕಾಣಿಸಿಕೊಂಡಿದ್ದಾರೆ. ಸದ್ಯ ಬಹುಭಾಷಾ ನಟಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಪ್ರಮುಖ ಚಿತ್ರಗಳು
ಥೋಲಿ ಪ್ರೇಮ, ಜೈ ಲವಕುಶ, ಬೆಂಗಾಲ್ ಟೈಗರ್, ಸುಪ್ರೀಂ, ಇಮೈಕಾ ನಾಡೋಡಿಗಲ್, ವೆಂಕಿ ಮಾಮಾ, ಅರನ್ಮನೈ ಸೇರಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಜಾಲತಾಣಗಳಲ್ಲಿ ಜನಪ್ರಿಯತೆ
ರಾಶಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ 12 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ತನ್ನ ಫ್ಯಾಷನ್, ಹಾಟ್ ಫೋಟೋಶೂಟ್‌ಗಳು ಮತ್ತು ಸಿನಿಮಾ ಅಪ್‌ಡೇಟ್‌ಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.
ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ ಬ್ಯೂಟಿ
ಸದ್ಯ ರಾಶಿ ಹಂಚಿಕೊಂಡಿರುವ ಫೋಟೋದಲ್ಲಿ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದಾರೆ. ಮೇಲ್ಭಾಗದಲ್ಲಿ ಬೆಳ್ಳಿಯ ಅಲಂಕಾರಗಳಿವೆ. ಸ್ಟ್ರಾಪ್‌ಲೆಸ್ ಉಡುಗೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.