ಬಹುಭಾಷಾ ನಟಿ ರಾಶಿ ಖನ್ನಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಾಶಿಯ ಮಾದಕ ನೋಟವನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಬ್ಲ್ಯಾಕ್ ಡ್ರೆಸ್ ಲುಕ್
ರಾಶಿ ಖನ್ನಾ ಅವರು ಇತ್ತೀಚೆಗೆ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಕಪ್ಪು ಬಣ್ಣದ ಕಾರ್ಸೆಟ್ ಟಾಪ್ನಲ್ಲಿ ಮಿಂಚಿದ್ದಾರೆ. ಎದೆ ಸೀಳು ಕಾಣುವಂತಹ ಉಡುಗೆ ಧರಿಸಿ, ವಿವಿಧ ಭಂಗಿಗಳಲ್ಲಿ ಮಾದಕವಾಗಿ ಪೋಸ್ ಪೋಸ್ ನೀಡಿದ್ದಾರೆ.
ಕಾಮೆಂಟ್ಗಳ ಸುರಿಮಳೆ
ಹಾಟ್ ಫೋಟೋದಲ್ಲಿ ರಾಶಿಯವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಸೌಂದರ್ಯ ರಾಶಿ ಎಂದು ಕೊಂಡಾಡುತ್ತಿದ್ದಾರೆ.
ಬಹುಭಾಷಾ ನಟಿ
ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ನಟಿಸಿರುವ ಇವರು, ದಕ್ಷಿಣ ಭಾರತದ ಜೊತೆಗೆ ಬಾಲಿವುಡ್‌ನಲ್ಲೂ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಪಾದಾರ್ಪಣೆ
2013 ರಲ್ಲಿ ಶೂಜಿತ್ ಸಿರ್ಕಾರ್ ನಿರ್ದೇಶನದ 'ಮದ್ರಾಸ್ ಕೆಫೆ' ಎಂಬ ಬಾಲಿವುಡ್ ಚಿತ್ರದ ಮೂಲಕ ನಟನಾ ವೃತ್ತಿಜೀವನವನ್ನು ಆರಂಭಿಸಿದರು. ನಂತರ ತೆಲುಗಿನ 'ಊಹಲು ಗುಸಗುಸಲಾಡೆ' ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಬ್ರೇಕ್ ಪಡೆದರು.
ಹಿಟ್ ಸಿನಿಮಾಗಳು
'ಇಮೈಕ್ಕಾ ನೊಡಿಗಲ್', 'ಸುಪ್ರೀಮ್', 'ಪ್ರತಿ ರೋಜು ಪಂಡಗೇ', 'ವೆಂಕಿ ಮಾಮಾ', 'ಥಿರುಚಿತ್ರಂಬಲಂ' ಮತ್ತು 'ಯೋಧ' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ಸಕ್ಸಸ್
'ಫರ್ಜಿ' (Farzi) ಮತ್ತು 'ರುದ್ರ: ದಿ ಡಾರ್ಕ್ನೆಸ್' ನಂತಹ ಖ್ಯಾತ ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಒಟಿಟಿಯಲ್ಲೂ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.
ಗಾಯಕಿ ಹಾಗೂ ಪ್ರತಿಭಾವಂತೆ
ನಟನೆ ಮಾತ್ರವಲ್ಲದೆ ಇವರು ಉತ್ತಮ ಗಾಯಕಿಯೂ ಹೌದು. ಹಲವು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿದ್ದಾರೆ.