ನಟ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದ ಪ್ರಿ-ರಿಲೀಸ್ ನಿನ್ನೆ (ಮಾರ್ಚ್ 15) ಹೈದರಾಬಾದ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟಿ ರಾಶಿ ಖನ್ನಾ ತುಂಬಾ ಮುದ್ದಾಗಿ ಮತ್ತು ಮಾದಕವಾಗಿ ಕಾಣಿಸಿಕೊಂಡರು.
ಮೊದಲ ಬಾರಿ ಪವನ್ ಜತೆ
ರಾಶಿ ಖನ್ನಾ ಅವರು ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ದೊಡ್ಡ ಸ್ಟಾರ್ ಸಿನಿಮಾ ರಾಶಿ ಅವರ ವೃತ್ತಿಜೀವನಕ್ಕೆ ಹೆಚ್ಚಿನ ಮೈಲೇಜ್ ನೀಡುವ ನಿರೀಕ್ಷೆಯಿದೆ.
ಪ್ರಮುಖ ಪಾತ್ರ
ಈ ಚಿತ್ರದಲ್ಲಿ ರಾಶಿ ಖನ್ನಾ ಅವರು ಕೇವಲ ಗ್ಲಾಮರ್ ಪಾತ್ರಕ್ಕೆ ಸೀಮಿತವಾಗದೆ, ಕಥೆಯ ಓಟಕ್ಕೆ ಪೂರಕವಾದ ಒಂದು ಸುಂದರ ಮತ್ತು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮತೋಲಿತ ತಾರಾಗಣ
ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಶ್ರೀಲೀಲಾ ಕೂಡ ನಾಯಕಿಯಾಗಿರುವುದರಿಂದ, ರಾಶಿ ಖನ್ನಾ ಅವರ ಪಾತ್ರವು ಶ್ರೀಲೀಲಾ ಅವರ ಪಾತ್ರಕ್ಕಿಂತ ಭಿನ್ನವಾಗಿ ಮತ್ತು ವಿಶಿಷ್ಟವಾಗಿ ಮೂಡಿಬರಲಿದೆ.
ನಿರ್ದೇಶಕರ ಜೊತೆಗಿನ ಒಡನಾಟ
ನಿರ್ದೇಶಕ ಹರೀಶ್ ಶಂಕರ್ ಅವರು ನಟಿಯರ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಸ್ಕ್ರೀನ್ ಮೇಲೆ ಸುಂದರವಾಗಿ ತೋರಿಸಲು ಹೆಸರುವಾಸಿ. ರಾಶಿ ಖನ್ನಾ ಪಾತ್ರವನ್ನೂ ಅಷ್ಟೇ ಸ್ಟೈಲಿಶ್ ಆಗಿ ತೆರೆಯ ಮೇಲೆ ತರುತ್ತಾರೆಂಬ ಮಾತುಗಳಿವೆ.
ತೇರಿಯಿಂದ ಸ್ಫೂರ್ತಿ
ಈ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರ 'ತೇರಿ' ಸಿನಿಮಾದಿಂದ ಸ್ಫೂರ್ತಿ ಪಡೆದಿದ್ದರೂ, ತೆಲುಗು ಪ್ರೇಕ್ಷಕರಿಗೆ ಮತ್ತು ಪವನ್ ಕಲ್ಯಾಣ್ ಅವರ ಇಮೇಜ್‌ಗೆ ತಕ್ಕಂತೆ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಮತ್ತೆ ಒಂದಾದ ಜೋಡಿ
ಗಬ್ಬರ್ ಸಿಂಗ್ನಂತಹ ಬ್ಲಾಕ್‌ಬಸ್ಟರ್ ಚಿತ್ರದ ಬಳಿಕ ಪವನ್ ಮತ್ತು ಹರೀಶ್ ಶಂಕರ್ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪವನ್ ಕಾಣಿಸಿಕೊಳ್ಳುತ್ತಿದ್ದಾರೆ.
ರಾಶಿಯ ಫೋಟೋಸ್ ವೈರಲ್
ನಿನ್ನೆ ನಡೆದ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ವೇಳೆ ರಾಶಿ ಅವರು ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು. ಅವರ ಫೋಟೋಗಳು ವೈರಲ್ ಆಗಿದ್ದು, ರಾಶಿ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.