ಬೋಲ್ಡ್​ ಬ್ಯೂಟಿ ರಾಶಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೋಲ್ಡ್​ ಬ್ಯೂಟಿ ರಾಶಿ

ನಟಿ ರಾಶಿ ಖನ್ನಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬ್ಯಾಕ್​ಲೆಸ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಡ್ಡೆ ಹುಡುಗರ ಮೈ ಬಿಸಿಯೇರಿಸಿದೆ.

ಬಹುಭಾಷಾ ನಟಿ

ರಾಶಿ ಖನ್ನಾ ಅವರು ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗದೆ ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 2013 ರಲ್ಲಿ ಹಿಂದಿಯ 'ಮದ್ರಾಸ್ ಕೆಫೆ' ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು.

ಹಿನ್ನೆಲೆ ಗಾಯಕಿ

ರಾಶಿ ಕೇವಲ ನಟಿಯಷ್ಟೇ ಅಲ್ಲ, ಉತ್ತಮ ಗಾಯಕಿ ಕೂಡ ಹೌದು. 'ಜೋರು', 'ವಿಲ್ಲನ್' ಮತ್ತು 'ಬಾಲಕೃಷ್ಣುಡು' ಅಂತಹ ಚಿತ್ರಗಳಲ್ಲಿ ಅವರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿ

ನಟಿಯಾಗುವ ಮೊದಲು ಅವರು ಓದಿನಲ್ಲಿ ತುಂಬಾ ಮುಂದಿದ್ದರು. ಇವರು ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ ಮತ್ತು ಐಎಎಸ್ (IAS) ಅಧಿಕಾರಿಯಾಗಬೇಕೆಂಬ ಕನಸನ್ನು ಹೊಂದಿದ್ದರು.

ಯಶಸ್ವಿ ಚಿತ್ರಗಳು

ತೆಲುಗಿನ 'ಊಹಲು ಗುಸಗುಸಲಾಡೆ' ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ನಂತರ 'ಬೆಂಗಾಲ್ ಟೈಗರ್', 'ಸುಪ್ರೀಂ', 'ಜೈ ಲವ ಕುಶ' ಮತ್ತು 'ತೊಲಿ ಪ್ರೇಮ' ಅಂತಹ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಡಿಜಿಟಲ್ ಪ್ಲಾಟ್‌ಫಾರ್ಮ್

ಇತ್ತೀಚಿನ ವರ್ಷಗಳಲ್ಲಿ ಅವರು ಓಟಿಟಿ (OTT) ಲೋಕದಲ್ಲೂ ಮಿಂಚುತ್ತಿದ್ದಾರೆ. ಅಜಯ್ ದೇವಗನ್ ಅವರ 'ರುದ್ರಾ' ಮತ್ತು ಶಾಹಿದ್ ಕಪೂರ್ ಅವರ 'ಫರ್ಜಿ' ವೆಬ್ ಸರಣಿಗಳಲ್ಲಿನ ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಕ್ಷೇತ್ರದಲ್ಲಿನ ಶ್ರೇಷ್ಠತೆ ಪ್ರಶಸ್ತಿ

ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ರಾಶಿ ಖನ್ನಾ ಅವರಿಗೆ, ಇತ್ತೀಚೆಗೆ 'ಇಂಡಿಯಾ 2030 ಲೀಡರ್‌ಶಿಪ್ ಕಾನ್ಕ್ಲೇವ್'ನಲ್ಲಿ "ಎಕ್ಸಲೆನ್ಸ್ ಇನ್ ಸಿನಿಮಾ" (ಸಿನಿಮಾ ಕ್ಷೇತ್ರದಲ್ಲಿನ ಶ್ರೇಷ್ಠತೆ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಕರ್ಷಕ ವೇಷಭೂಷಣ

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಶಿ ಅವರು ಗಾಢ ಆಲಿವ್ ಹಸಿರು ಬಣ್ಣದ ಲೆಹೆಂಗಾ ಧರಿಸಿ ಮಿಂಚಿದರು. ಹೂವಿನ ವಿನ್ಯಾಸದ ಸೀಕ್ವಿನ್ ವರ್ಕ್ ಇರುವ ಪೂರ್ಣ ತೋಳಿನ ಕ್ರಾಪ್ ಬ್ಲೌಸ್ ಅವರ ಮಾದಕ ನೋಟಕ್ಕೆ ಮತ್ತಷ್ಟು ಮೆರುಗು ನೀಡಿತು.

ಅಭಿಮಾನಿಗಳು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಶಿ, ಆಗಾಗ ತಮ್ಮ ಮಾದಕ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದು ರಾಶಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.