ಮಳೆಗಾಲದ ಸೋಂಕಿನಿಂದ ಶ್ವಾಸಕೋಶವನ್ನು ಹೀಗೆ ಕಾಪಾಡಿಕೊಳ್ಳಿ!

ಭಾನುಪ್ರಿಯ ಡಿ.ಕೆ

ಮಳೆಗಾಲದ ಸೋಂಕಿನಿಂದ ಶ್ವಾಸಕೋಶವನ್ನು ಹೀಗೆ ಕಾಪಾಡಿಕೊಳ್ಳಿ!

ಮಾನ್ಸೂನ್ ಅವಧಿಯಲ್ಲಿ ವಾತಾವರಣದಲ್ಲಿನ ತೇವಾಂಶ ಮತ್ತು ತಂಪಾದ ಗಾಳಿಯಿಂದಾಗಿ ಶ್ವಾಸಕೋಶದ ಸೋಂಕುಗಳು ಹಾಗೂ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ದಿನಗಳಲ್ಲಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ಸಲಹೆಗಳು ಇಲ್ಲಿವೆ.

ಬಿಸಿ ನೀರು ಮತ್ತು ಹಬೆ ತೆಗೆದುಕೊಳ್ಳಿ

ದಿನವಿಡೀ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲು ಸ್ವಚ್ಛವಾಗಿರುತ್ತದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಕರಗಿದ ನೀರಿಗೆ ಸ್ವಲ್ಪ ಹರಶಿನ ಅಥವಾ ಪುದೀನಾ ಎಲೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಮತ್ತು ಶ್ವಾಸಕೋಶದ ಮಾರ್ಗದಲ್ಲಿನ ಕಫ ಕರಗುತ್ತದೆ.

ಮನೆಮದ್ದು ಹಾಗೂ ಪೌಷ್ಟಿಕ ಆಹಾರ

ರೋಗನಿರೋಧಕ ಶಕ್ತಿ ಹೆಚ್ಚಿಸಲು ಶುಂಠಿ, ಬೆಳ್ಳುಳ್ಳಿ, ಮೆಣಸು ಮತ್ತು ತುಳಸಿ ಎಲೆಗಳನ್ನು ಒಳಗೊಂಡ ಕಷಾಯ ಅಥವಾ ಟೀ ಸೇವಿಸಿ. ವಿಟಮಿನ್ ಸಿ ಸಮೃದ್ಧವಾಗಿರುವ ಬಿಸಿಬಿಸಿಯಾದ ಸೂಪ್ ಹಾಗೂ ತಾಜಾ ಆಹಾರಗಳಿಗೆ ಆದ್ಯತೆ ನೀಡಿ.

ಮನೆಯೊಳಗಿನ ತೇವಾಂಶ ನಿಯಂತ್ರಿಸಿ

ಮಳೆಗಾಲದಲ್ಲಿ ಗೋಡೆಗಳಲ್ಲಿ ತೇವಾಂಶ ಹೆಚ್ಚಾಗಿ ಶಿಲೀಂಧ್ರ (Mold) ಬೆಳೆಯಬಹುದು, ಇದು ಆಸ್ತಮಾ ರೋಗಿಗಳಿಗೆ ಅಪಾಯಕಾರಿ. ಮನೆಗೆ ಉತ್ತಮ ಗಾಳಿ-ಬೆಳಕು ಬರುವಂತೆ ನೋಡಿಕೊಳ್ಳಿ ಮತ್ತು ಹಾಸಿಗೆ, ಚಾಪೆಗಳನ್ನು ಒಣದಾಗಿಡಿ.

ಉಸಿರಾಟದ ವ್ಯಾಯಾಮಗಳು

ಪ್ರತಿದಿನ 10-15 ನಿಮಿಷಗಳ ಕಾಲ ಪ್ರಾಣಾಯಾಮ (ಉದಾಹರಣೆಗೆ ಅನುಲೋಮ-ವಿಲೋಮ, ಕಪಾಲಭಾತಿ) ಮಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆಮ್ಲಜನಕದ ಸರಬರಾಜು ಸುಧಾರಿಸುತ್ತದೆ.

ವೈಯಕ್ತಿಕ ಶುಚಿತ್ವ ಮತ್ತು ಉಡುಪು

ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ. ಒಂದು ವೇಳೆ ನೆನೆದರೆ ತಕ್ಷಣವೇ ಒಣ ಬಟ್ಟೆ ಧರಿಸಿ. ಧೂಳು ಮತ್ತು ಸೋಂಕುಗಳಿಂದ ದೂರವಿರಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳಿತು.