ಕೇನ್ಸ್​ನಲ್ಲಿ ಮಿನುಗಿದ ಪ್ರಿಯಾಂಕಾ ಉಪೇಂದ್ರ

ವಿನಾಯಕ ನಾಯಕ

ಕೇನ್ಸ್​ನಲ್ಲಿ ಮಿನುಗಿದ ಪ್ರಿಯಾಂಕಾ ಉಪೇಂದ್ರ

ವಿಶ್ವದ ಅತ್ಯಂತ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಹೆಜ್ಜೆ ಹಾಕುವ ಮೂಲಕ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿದ್ದಾರೆ.

ರೆಡ್​ ಹಾಟ್​ ಡ್ರೆಸ್​

ಕೇನ್ಸ್ ಉತ್ಸವದಲ್ಲಿ ಪ್ರಿಯಾಂಕಾ ಕೆಂಪು ಬಣ್ಣದ ಡ್ರೆಸ್​ ಧರಿಸಿದ್ದರು. ಅವರ ಈ ಲುಕ್​ ಜನರನ್ನು ಆಕರ್ಶಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಕನ್ನಡಿಗರನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗ್ಲಾಮರಸ್ ಫೋಟೊ ಹಂಚಿಕೆ

ಕೇನ್ಸ್ ಪ್ರವಾಸದ ಅದ್ಭುತ ಕ್ಷಣಗಳು, ತಮ್ಮ ರೆಡ್ ಕಾರ್ಪೆಟ್ ಲುಕ್ ಹಾಗೂ ಕಾರ್ಯಕ್ರಮದ ಸುಂದರ ಚಿತ್ರಗಳನ್ನು ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ

ಸಾಮಾನ್ಯವಾಗಿ ಬಾಲಿವುಡ್ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವ ಕೇನ್ಸ್ ಚಿತ್ರೋತ್ಸವದ ವೇದಿಕೆಯಲ್ಲಿ, ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯೊಬ್ಬರು ಭಾಗವಹಿಸಿರುವುದು ಕನ್ನಡ ಚಿತ್ರರಂಗದ ಜಾಗತಿಕ ಮಟ್ಟದ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಜಾಗತಿಕ ಸಿನಿಮಾಗಳ ವೀಕ್ಷಣೆ

ಕೇನ್ಸ್ ಉತ್ಸವದ ಅವಧಿಯಲ್ಲಿ ಪ್ರಿಯಾಂಕಾ ಅವರು ವಿಶ್ವದ ವಿವಿಧ ದೇಶಗಳ ಚಲನಚಿತ್ರ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ ಹಾಗೂ ಜಾಗತಿಕ ಸಿನಿಮಾ ರಂಗದ ಪ್ರಮುಖ ತಂತ್ರಜ್ಞರು ಮತ್ತು ನಿರ್ಮಾಪಕರನ್ನು ಭೇಟಿಯಾಗಿ ಸಿನೆಮಾ ಕುರಿತು ಚರ್ಚಿಸಿದ್ದಾರೆ.

ಅಭಿಮಾನಿಗಳು ಮತ್ತು ಗಣ್ಯರ ಶುಭಾಶಯ

ಪ್ರಿಯಾಂಕಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಸ್ಯಾಂಡಲ್‌ವುಡ್ ಕಲಾಬಂಧುಗಳು ಹಾಗೂ ಕೋಟ್ಯಂತರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ, "ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.