ವಿಂಟೇಜ್ ಲುಕ್​ನಲ್ಲಿ 'ದೇಸಿ ಗರ್ಲ್'

ಮಮತಾ

ವಿಂಟೇಜ್ ಲುಕ್​ನಲ್ಲಿ 'ದೇಸಿ ಗರ್ಲ್'

ಅಂತರಾಷ್ಟ್ರೀಯ ಫ್ಯಾಷನ್ ಲೋಕದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. 2026ರ ಪ್ರತಿಷ್ಠಿತ 'ಗೋಲ್ಡ್ ಗಾಲಾ' ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ತಮ್ಮ ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಸಮ್ಮಿಲನದ ಮೂಲಕ ಫ್ಯಾಷನ್ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

20 ವರ್ಷ ಹಳೆಯ ಸೀರೆಗೆ ಹೊಸ ಮೆರುಗು

'ಗೋಲ್ಡ್ ಗಾಲಾ' ಸಮಾರಂಭದಲ್ಲಿ ಪ್ರಿಯಾಂಕಾ ಧರಿಸಿದ್ದ ಉಡುಪು. ಇದು ಕೇವಲ ಫ್ಯಾಷನ್ ಮಾತ್ರವಲ್ಲದೆ, ಒಂದು ಭಾವನಾತ್ಮಕ ಪಯಣವೂ ಹೌದು. ಅವರು ಸುಮಾರು 20 ವರ್ಷಗಳಷ್ಟು ಹಳೆಯದಾದ ಚಿಂಕಕರಿ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಚಿಕಂಕರಿ ಸೀರೆ ಹಿನ್ನಲೆ ಏನು?

ಲಕ್ನೋದ ಸಾಂಪ್ರದಾಯಿಕ ಕಲೆಯಾದ ಚಿಂಕಕರಿ ಕೆಲಸವಿರುವ ಈ ವಿಂಟೇಜ್ ಸೀರೆಯನ್ನು ಪ್ರಸಿದ್ಧ ಡಿಸೈನರ್ ಅಮಿತ್ ಅಗರ್ವಾಲ್ ಅವರು ಅತ್ಯಾಧುನಿಕ 'ಕೌಚರ್' ಶೈಲಿಯಲ್ಲಿ ಆಧುನಿಕ ಜಗತ್ತಿಗೆ ತಕ್ಕಂತೆ ಕೀರ್ತಿ ಅಮಿತ್ ಅಗರ್ವಾಲ್ ಮರುವಿನ್ಯಾಸಗೊಳಿಸಿದ್ದಾರೆ.

ಸಂದೇಶ ಸಾರಿದ ಪಿಂಕಿ ಫ್ಯಾಷನ್ ಆಯ್ಕೆ

ಪ್ರಿಯಾಂಕಾ ಅವರ ಈ ಆಯ್ಕೆಯು 'ಸಸ್ಟೈನಬಲ್ ಫ್ಯಾಷನ್' ಅಥವಾ ಸುಸ್ಥಿರ ಫ್ಯಾಷನ್‌ಗೆ ದೊಡ್ಡ ಪ್ರೋತ್ಸಾಹ ನೀಡಿದೆ. ಹಳೆಯ ಉಡುಪುಗಳನ್ನು ಬಿಸಾಡುವ ಬದಲು, ಅವುಗಳನ್ನು ಮರುಬಳಕೆ ಮಾಡಿ ಅಥವಾ ಹೊಸ ರೂಪ ನೀಡಿ ಹೇಗೆ ಹೊಸದಾಗಿ ಕಾಣಿಸಬಹುದು ಎಂಬುದಕ್ಕೆ ಪ್ರಿಯಾಂಕಾ ಅವರ ಈ ಉಡುಪು ಅತ್ಯುತ್ತಮ ಉದಾಹರಣೆಯಾಗಿದೆ.

ತಾಯಿ ಮಾರ್ಗದರ್ಶನದಿಂದ ಇಲ್ಲಿದ್ದೇನೆ

ನನ್ನ ತಾಯಿ ಮಧು ಚೋಪ್ರಾ ಅವರು ಕೊಟ್ಟ ಮಾರ್ಗದರ್ಶನ, ನೀಡಿದ ಪ್ರೋತ್ಸಾಹದಿಂದಲೇ ಇಂದು ನಾನು ಇಲ್ಲಿದ್ದೇನೆ. ಇಲ್ಲಿದ್ದರೆ. ಜಾಗತಿಕ ಮಟ್ಟದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಪಿಗ್ಗಿ ಚಾಪ್ಸ್​ನ ಸಿನಿ ಪಯಣ

ಪ್ರಿಯಾಂಕಾ ಚೋಪ್ರಾ ಅವರು ವಿಜಯ್​ ಜೊತೆ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಈ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಮೇರಿ ಕೋಮ್, ಬರ್ಫಿ, ದೋಸ್ತನಾ, ದಿ ಬ್ಲಫ್​, ದಿ ವೈಟ್​ ಟೈಹರ್​​, ಬಾಜಿರಾವ್​ ಮಸ್ತಾನಿ, ಫ್ಯಾಷನ್​ ಇನ್ನು ಹಲವು ಹಿಟ್​ ಸಿನಿಮಾಗಳು ಇವೆ.