ಸೀರೆಯಲ್ಲಿ ಮಿಂಚಿದ 'ರಾಮ್'​ನ ಪ್ರಿಯಾ

ಮಮತಾ

ಸೀರೆಯಲ್ಲಿ ಮಿಂಚಿದ 'ರಾಮ್'​ನ ಪ್ರಿಯಾ

ಸೌತ್​ ಇಂಡಿಯಾದ ಬೇಡಿಕೆಯ ನಟಿಯಾಗಿಯೇ ಉಳಿದುಕೊಂಡಿರುವ ನಟಿ ಪ್ರಿಯಾಮಣಿ ಗೋಲ್ಡನ್​ ಬಣ್ಣದ ಸೀರೆಯುಟ್ಟು, ಅದಕ್ಕೆ ತಕ್ಕಂತೆ ಜುಮ್ಕಾ ತೊಟ್ಟು ಕಂಗೊಳಿಸಿದ್ದಾರೆ. 42ರಲ್ಲೂ ಅವರ ಎವರ್​ಗ್ರೀನ್​ ಸೌಂದರ್ಯ ಪಡ್ಡೆಹುಡುಗರು ನಿದ್ದೆಗೆಡಿಸಿದ್ದಾರೆ.

ಜನನಾಯಗನ್​ನಲ್ಲಿ ಪಿಲ್ಲುಮಣಿ ಆಕ್ಟಿಂಗ್​

ಸಿಎಂ ವಿಜಯ್ ಅವರ ಕೊನೇ ಸಿನಿಮಾ ಜನನಾಯಗನ್​ನಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್​ ಅವರು ಒಳ್ಳೆಯ ಪಾತ್ರವನ್ನು ಮಾಡುತ್ತಿದ್ದಾರೆ. ಹೀಗೆ ಮುಂದುವರೆಯಬೇಕು. ಅವರ ಕಾರ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ಜನನಾಯಗನ್​ ರಿಲೀಸ್​​ ಬಗ್ಗೆ ಕೇಳಿದಾಗ ಪ್ರಿಯಾಮಣಿ ಹೇಳಿದ್ದು ಹೀಗೆ.

ಕನ್ನಡದಲ್ಲಿ ನಟನೆ

ಪ್ರಿಯಾಮಣಿಗೆ ಕಾಲಿವುಡ್​, ಟಾಲಿವುಡ್​ ಮಾತ್ರವಲ್ಲ ಸ್ಯಾಂಡಲ್​ವುಡ್​ನಲ್ಲೂ ಸಾಕಷ್ಟು ಫ್ಯಾನ್ಸ್ ಇದ್ದಾರೆ. ರಾಮ್​, ಅಣ್ಣಾಬಾಂಡ್​​, ಏನೋ ಒಂಥರಾ, ವಿಷ್ಣು ವರ್ಧನ, ಡಾ.56 ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ಬಾಲಿವುಡ್​ನಲ್ಲೂ ನಟನೆ

ರಾವಣ್​, ಜವಾನ್​, ಆರ್ಟಿಕಲ್​ 370, ಮೈದಾನ್​. ಐಶ್ವರ್ಯಾ ರೈ, ಅಭಿಷೇಕ್​ ಬಚ್ಚನ್​ ನಟನೆಯ ನಟನೆಯ ರಾವಣ್​​ ಸಿನಿಮಾ ನಂತರ ಬಾಲಿವುಡ್​ನಲ್ಲಿ ಹೆಚ್ಚೆಚ್ಚು ಸಿನಿಮಾಗಳ ಆಫರ್​ ಸಿಗುತ್ತೆ ಎನ್ನುವ ಕನಸು ಕಂಡಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

ಸರಸ್ವತಿ ಸಿನಿಮಾ

ಇತ್ತೀಗೆ ಶರತ್​ ಕುಮಾರ್​ ಪುತ್ರಿ ವರಲಕ್ಷ್ಮಿ ಶರತ್​ ಕುಮಾರ್ ನಟಿಸಿ ನಿರ್ದೇಶಿಸಿದ ಸಿನಿಮಾದಲ್ಲಿ ಪ್ರಿಯಾಮಣಿ ನಟಿಸಿದ್ದರು. ಕಿಶೋರ್​ ಹಾಗೂ ಪ್ರಿಯಾಮಣಿಯವರ ಆಕ್ಟಿಂಗ್​​ ಜೀವಂತವಾಗಿದ್ದು, ಕಣ್ಣಾಲಿಗಳನ್ನು ಒದ್ದೆ ಮಾಡಿದ್ದವು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಣಾ ವ್ಯವಸ್ಥೆ, ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ಈ ಸಿನಿಮಾ ಹೇಳುತ್ತದೆ.

ತೆಲುಗು ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರಿಯಾ

ಇವರೇ ಆಟಗಾಡು ಎನ್ನುವ ತೆಲುಗು ಸಿನಿಮಾ ಮೂಲಕ 2003ರಲ್ಲಿ ಪ್ರಿಯಾಮಣಿ ಚಿತ್ರರಂಗಕ್ಕೆ ಕಾಲಿಟ್ಟರು. ನಟನೆಯಲ್ಲಿನ ಜೀವಂತಿಕೆ ಮಾದಕ ನೋಟ, ಕುಣಿತದ ಪರಿ ಅವರನ್ನು ಸೂಪರ್​​ಸ್ಟಾರ್​ನ್ನಾಗಿ ಮಾರ್ಪಡುವಂತೆ ಮಾಡಿತು.

ಮುಸ್ತಫಾ ಜೊತೆ ಮದುವೆ

ಪ್ರಿಯಾಮಣಿ ಅವರು 2017ರಲ್ಲಿ ಮುಸ್ತಫಾ ರಾಜ್​ ಎಂಬುವವರನ್ನು ಮದುವೆ ಯಾದರರು. ಇವರು ಬೆಂಗಳೂರಿನಲ್ಲಿ ಉದ್ಯಮಿ ಹಾಗೂ ಈವೆಂಟ್​ ಮ್ಯಾನೇಜರ್​​​. ಇವರು ರಿಜಿಸ್ಟರ್​ ಮದುವೆಯಾದರು. ಮದುವೆಗಾಗಿ ಧರ್ಮ ಬದಲಾಯಿಸಲ್ಲ ನಾನು ಹಿಂದೂ ಧರ್ಮದಲ್ಲೇ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದರು

ಟಾಲಿವುಡ್, ಕಾಲಿವುಡ್​ ಸಿನಿಮಾವಿದು

ಎವರೆ ಅಂತಗಾಡು, ಯಮದೊಂಗ, ಪ್ರವರಾಖ್ಯುಡು, ಶಂಭೋ ಶಿವ ಶಂಭೋ, ಚಾರುಲತಾ, ಪರುತೀವೀರನ್, ರಾವಣನ್​, ಕಂಗಲಲ್​ ಕೈದು ಸೇ