ಮಕಾವು ಪ್ರವಾಸದಲ್ಲಿ ವಿಂಕ್ ಗರ್ಲ್!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಕಾವು ಪ್ರವಾಸದಲ್ಲಿ ವಿಂಕ್ ಗರ್ಲ್!

ಇತ್ತೀಚಿನ ವಿದೇಶಿ ಪ್ರವಾಸದ ವೇಳೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತೆಗೆಸಿಕೊಂಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚೀನಾದ ಪ್ರಸಿದ್ಧ ತಾಣ

ಸ್ಟಾರ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಚೀನಾದ ಪ್ರಸಿದ್ಧ ಪ್ರವಾಸಿ ತಾಣವಾದ ಮಕಾವು ನಗರದಲ್ಲಿ ರಜಾದಿನಗಳನ್ನು ಎಂಜಾಯ್ ಮಾಡಿದ್ದಾರೆ.

ಜಾಲತಾಣದಲ್ಲಿ ಸಂಚಲನ

ಮಕಾವಿನ ಸುಂದರ ತಾಣಗಳಲ್ಲಿ ಅವರು ಶಾರ್ಟ್ ಸ್ಕರ್ಟ್ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ನೆಟ್ಟಿಗರ ಮನಗೆದ್ದ ಹಾಟ್ ಲುಕ್

ತಮ್ಮ ಹೊಸ ಮಾಡರ್ನ್ ಹಾಗೂ ಬೋಲ್ಡ್ ಲುಕ್ ಮೂಲಕ ಪ್ರಿಯಾ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಅವರ ಫೋಟೋಗಳಿಗೆ ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಗರೆಯುತ್ತಿದ್ದಾರೆ.

ಕ್ಷಣಾರ್ಧದಲ್ಲಿ ವೈರಲ್

ಕಣ್ಣು ಸನ್ನೆಯ ಮೂಲಕವೇ ದೇಶಾದ್ಯಂತ ಖ್ಯಾತಿ ಗಳಿಸಿದ್ದ ಈ ನಟಿಯ ಹೊಸ ಗ್ಲಾಮರಸ್ ಫೋಟೋಶೂಟ್, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ.

ರಾತ್ರೋರಾತ್ರಿ ಸಿಕ್ಕ ಸ್ಟಾರ್‌ಡಮ್

2018ರಲ್ಲಿ ಬಿಡುಗಡೆಯಾದ 'ಒರು ಅದಾರ್ ಲವ್' ಎಂಬ ಮಲಯಾಳಂ ಸಿನಿಮಾದ 'ಮಾಣಿಕ್ಯ ಮಲರಾಯ ಪೂವಿ' ಹಾಡಿನಲ್ಲಿ ಕೇವಲ ಒಂದು 'ಕಣ್ಣು ಸನ್ನೆ' ಮಾಡುವ ಮೂಲಕ ದೇಶಾದ್ಯಂತ ರಾತ್ರೋರಾತ್ರಿ ಪ್ರಸಿದ್ಧಿ ಪಡೆದರು ಪ್ರಿಯಾ .

ಬಹುಭಾಷಾ ನಟಿ

ಮೂಲತಃ ಕೇರಳದ ತ್ರಿಶೂರ್‌ನವರಾದ ಪ್ರಿಯಾ, ಮಲಯಾಳಂ ಮಾತ್ರವಲ್ಲದೆ ತೆಲುಗು (ಚೆಕ್, ಇಷ್ಕ್), ಹಿಂದಿ ಹಾಗೂ ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಅವರು 'ವಿಷ್ಣುಪ್ರಿಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಪಡ್ಡೆ ಹುಡುಗರು ಫಿದಾ

ಸದ್ಯ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಪ್ರಿಯಾ ಅವರ ಹಾಟ್​ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದು, ಕಾಮೆಂಟ್​ಗಳ ಮೂಲಕ ಕಣ್ಸನ್ನೆ ಬೆಡಗಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.