ದೇಸಿ ಲುಕ್​ನಲ್ಲಿ ಪ್ರಿಯಾ ಪ್ರಕಾಶ್

ಮಮತಾ

ಮಲಯಾಳಂ ಸುಂದರಿ, ಕಣ್ಸನ್ನೇ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಟ್ರೆಡಿಷನಲ್ ಲುಕ್‌ನಲ್ಲಿ ಕಣ್ಮನ ಸೆಳೆದಿದ್ದಾರೆ. ಲಂಗ ದಾವಣಿಯುಟ್ಟು ಪೋಸ್ಟ್​ ಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್

ಹೊಸ ಲುಕ್ ವೈರಲ್

ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಪಾತ್ರರಾಗಿದ್ದಾರೆ. ಎಥ್ನಿಕ್ ವೇರ್‌ನಲ್ಲಿ ನಟಿಯ ಈ ಅಂದವನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಲಂಗ ದಾವಣಿಯಲ್ಲಿ ಮಿಂಚಿಂಗ್

ಹಸಿರು ಬಣ್ಣದ ಸುಂದರ ಸೀರೆಗೆ ಮರೂನ್ ಬಣ್ಣದ ಬ್ಲೌಸ್ ಧರಿಸಿ, ಕುತ್ತಿಗೆಗೆ ಗೋಲ್ಡ್ ಜ್ಯುವೆಲ್ಲರಿ ಹಾಗೂ ಹಣೆಗೆ ಬೊಟ್ಟು ಇಟ್ಟುಕೊಂಡು ಪಾರಂಪರಿಕ ಶೈಲಿಯಲ್ಲಿ ಕಂಗೊಳಿಸಿದ್ದಾರೆ. ಹಸಿರು ಎಲೆಗಳ ಹಿನ್ನೆಲೆಯಲ್ಲಿ, ಮುಕ್ತವಾಗಿ ಬಿಟ್ಟಿರುವ ಕೂದಲಿನೊಂದಿಗೆ ದೇಸಿ ಲುಕ್ ಕೊಟ್ಟಿದ್ದಾರೆ.

ಮುಂಬರುವ ಸಿನಿಮಾ

ವೃತ್ತಿಪರ ರಂಗದ ವಿಚಾರಕ್ಕೆ ಬಂದರೆ, ಪ್ರಿಯಾ ಪ್ರಕಾಶ್ ವಾರಿಯರ್ ಪಾಲಿಗೆ ಸದ್ಯದ ದಿನಗಳು ತುಸು ಶಾಂತವಾಗಿವೆ. ನಟಿಗೆ ಯಾವುದೇ ಪ್ರಮುಖ ಸಿನಿಮಾಗಳ ಘೋಷಣೆಗಳಾಗಲಿ ಅಥವಾ ದೊಡ್ಡ ಪ್ರಾಜೆಕ್ಟ್‌ಗಳ ಒಪ್ಪಂದಗಳಾಗಲಿ ಸದ್ಯಕ್ಕೆ ಲಭ್ಯವಿಲ್ಲ.

ಸ್ಟೈಲಿಶ್​ ಲುಕ್​​​ನಿಂದ ಹೆಸರು

ಸಿನಿಮಾ ಅಪಡೇಟ್​ ಬಗ್ಗೆ ಕೊರತೆಯಿದ್ದರೂ ಸಹ, ಅವರ ಸ್ಟೈಲಿಶ್ ಅಪ್‌ಡೇಟ್ಸ್‌ಗಳು ಮತ್ತು ಬೃಹತ್ ಅಭಿಮಾನಿ ಬಳಗವು ಅವರನ್ನು ನಿರಂತರವಾಗಿ ಸೋಷಿಯಲ್ ಮೀಡಿಯಾದ ಮುಂಚೂಣಿಯಲ್ಲಿ ಹಾಗೂ ಸುದ್ದಿಯಲ್ಲಿರಿಸುವಂತೆ ಮಾಡಿದೆ.

ಒರು ಅಡಾರ್ ಲವ್​ನಿಂದ ಬೆಳ್ಳಿತೆರೆಗೆ

ಪ್ರಿಯಾ ಪ್ರಕಾಶ್ ವಾರಿಯರ್​ ಅವರ ಒರು ಅಡಾರ್​ ಲವ್ ಸಿನಿಮಾ ಮೂಲಕ ಬೆಳ್ಳಿ ತೆರೆಮೇಲೆ ಹೆಚ್ಚು ಪ್ರಖ್ಯಾತತೆ ಪಡೆದುಕೊಂಡರು. ಸಿನಿಮಾದಲ್ಲಿ ಕಣ್ಸನ್ನೇ ಮೂಲಕ ಲವ್​ ಪ್ರಪೋಸ್ ಮಾಡುವ ಪ್ರಸಂಗವು ಸಾಕಷ್ಟು ವೈರಲ್ ಆಗಿತ್ತು.

ಪ್ರಿಯಾ ನಟಿಸಿದ ಸಿನಿಮಾವಿದು

ವಿಷ್ಣು ಪ್ರಿಯಾ, ಚೆಕ್​, ಇಶ್ಕ್​, ಬ್ರೋ ಯಾರಿಯಾನ್​ 2, ಲೈವ್, ಕೊಲ್ಲ, ಮಂದಾಕಿನಿ, ಗುಡ್​ ಬ್ಯಾಡ್​ ಅಗ್ಲಿ, 4 ಯಿಯರ್ಸ್, ನಿಲುವುಕು ಎನ್ಮೇಲೆ ಎನ್ನಡಿ ಕೋಪಂ ಸಿನಿಮಾದಲ್ಲಿ ನಟಿಸಿದ್ದಾರೆ.