'ಸರ್ವಂ ಮಾಯಂ' ಪ್ರೀತಿ

ಮಮತಾ

'ಸರ್ವಂ ಮಾಯಂ' ಪ್ರೀತಿ

ಕನ್ನಡದ ನಟ ಅರ್ಜುನ್​ ಸರ್ಜಾ ಅವರ ಬ್ಲಾಸ್​ ಸಿನಿಮಾದಲ್ಲಿ ಅಬ್ಬರಿಸಿದ ಪ್ರೀತಿ ಮುಕುಂದನ್​ ಸದ್ಯ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ಈ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ್ದ ಈ ಸಿನಿಮಾ 70 ಕೋಟಿ ಗಳಿಕೆ ಕಂಡಿತ್ತು. ಸದ್ಯ ನೆಟ್​ಫ್ಲಿಕ್ಸ್​ನಲ್ಲಿ ಸದ್ದು ಮಾಡುತ್ತಿದೆ.

ಬ್ಲಾಸ್ಟ್​ ಬಗ್ಗೆ

ಸುಭಾಷ್​ ಕೆ ರಾಜ್​ ನಿರ್ದೇಶನದ ಬ್ಲಾಸ್ಟ್​ ಸಿನಿಮಾದಲ್ಲಿ ಅರ್ಜುನ್​ ಸರ್ಜಾ, ಲಾಲಿಹಾಡು ಖ್ಯಾತಿಯ ನಟಿ ಅಭಿರಾಮಿ, ಪ್ರೀತಿ ಮುಕುಂದನ್​ ಜಾನ್​ ಕೊಕ್ಕೆನ್​ ಸೇರಿದಂತೆ ಘಟಾನುಘಟಿ ನಟರು ಇದ್ದಾರೆ. ಮಧ್ಯಮ ವರ್ಗದ ಕುಟುಂಬ ಕರಾಟೆ ಮಾಸ್ಟರ್​ ಆದ ಅರ್ಜುನ್​ ಸರ್ಜಾ ಮಗಳು ಚಿಕ್ಕವಳಿದ್ದಾಗಲೇ ಕರಾಟೆ ಕಲಿಸುತ್ತಾನೆ,. ಆಕೆ ದೊಡ್ಡವಳಾಗುತ್ತಲೇ ಎದುರಿಸುವ ಸಮಸ್ಯೆಯೇ ಚಿತ್ರದ ಕಥಾ ಹಂದರ.

ಬ್ಲಾಸ್​​ನಲ್ಲಿ ಖಡಕ್​ ಲುಕ್

ಬ್ಲಾಸ್ಟ್​ ಸಿನಿಮಾದಲ್ಲಿ ಪ್ರೀತಿ ಅವರು ಅಪ್ಪನಿಗೆ ತಕ್ಕುದಾಗಿ ನಟಿಸಿದ್ದಾರೆ. ಕರಾಟೆ ಕಲಿತ ಯುವತಿ ತನ್ನ ರಕ್ಷಣೆಗೆ ತಾನು ಹೇಗೆ ನಿಲ್ಲಬೇಕು ಎನ್ನುವುದನ್ನು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಸರ್ವಂ ಮಾಯಂ, ಓಂ ಭೂಂ ಭುಷ್​ಗಿಂತ ವಿಶಿಷ್ಟ ಪಾತ್ರ ಇದಾಗಿದೆ.

ಪ್ರೀತಿ ನಟಿಸಿದ ಸಿನಿಮಾಗಳಿವು

24 ವರ್ಷದ ಈ ನಟಿ ಕಣ್ಣಪ್ಪ, ಸರ್ವಂ ಮಾಯಂ, ಮೇನ್​ ಪ್ಯಾರ್​ ಕಿಯಾ ಹಾಗೂ ಸ್ಟಾ, ಓಂ ಭೂಮ್​ ಭುಷ್​ ಸಿನಿಮಾದಲ್ಲಿ ನಟಿಸಿದ್ದಾರೆ.

ಪಾತ್ರಕ್ಕೆ ಒಳ್ಳೆ ಪ್ರತಿಕ್ರಿಯೆ

ಬ್ಲಾಸ್ಟ್​ ಸಿನಿಮಾದಲ್ಲಿ ನನ್ನ ಆಕ್ಷನ್​ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡರು. ನನಗೆ ನಿಜಕ್ಕೂ ಸಂತೋಷವಾಗಿದೆ ಎಂದು ಸಂದರ್ಶನವೊಂದರಲ್ಲಿ ಪ್ರೀತಿ ಹೇಳಿಕೊಂಡಿದ್ದಾರೆ.