ಅದೊಂದು ತಪ್ಪಿನಿಂದ ಪ್ರಭಾಸ್​ಗೆ ಬ್ಯಾಕ್​ ಟು ಬ್ಯಾಕ್​ ಫ್ಲಾಪ್

Vijayavan

ಅದೊಂದು ತಪ್ಪಿನಿಂದ ಪ್ರಭಾಸ್​ಗೆ ಬ್ಯಾಕ್​ ಟು ಬ್ಯಾಕ್​ ಫ್ಲಾಪ್

'ಬಾಹುಬಲಿ' ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿರುವ ಪ್ರಭಾಸ್ ಅದ್ಯಾಕೋ ಸರಣಿ ಸೋಲುಗಳಿಂದ ತತ್ತರಿಸಿದ್ದಾರೆ. ಇದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ರಾಜ ಸಾಬ್' ಚಿತ್ರದ ಸೋಲೇ ಮತ್ತೊಂದು ಬಲವಾದ ಸಾಕ್ಷಿ. ​

'ಬಾಹುಬಲಿ' ಬಳಿಕ ಯಾವುದೇ ಹಿಟ್​ ಇಲ್ಲ....

'ಬಾಹುಬಲಿ' ನಂತರ ಬಂದ ಯಾವ ಸಿನಿಮಾಗಳು ಕೂಡ ಪ್ರಭಾಸ್​ಗೆ ಅಷ್ಟರಮಟ್ಟಿಗೆ ಯಶಸ್ಸು ತಂದುಕೊಟ್ಟಿಲ್ಲ.

ಸರಣಿ ಫ್ಲಾಪ್​

'ಸಾಹೋ', 'ರಾಧೆಶ್ಯಾಮ್'​ ಸಿನಿಮಾಗಳು ಫ್ಲಾಪ್​ ಆದವು. 'ಸಲಾರ್'​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದರೂ ನಿರೀಕ್ಷೆಯ ಮಟ್ಟ ತಲುಪಲಿಲ್ಲ

'ಕಲ್ಕಿ' ಸಕ್ಸಸ್​

ಅದಾದ ಬಳಿಕ 'ಕಲ್ಕಿ' ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಆದರೆ, ಅದು ಬಹುತಾರಾಗಣ ಚಿತ್ರ ಆದ್ದರಿಂದ ಪ್ರಭಾಸ್​ ಒಬ್ಬರಿಗೆ ಯಶಸ್ಸಿನ ಕ್ರೆಡಿಟ್​ ಸಲ್ಲಲಿಲ್ಲ

'ಸ್ಪಿರಿಟ್' ಮೇಲೆ ಎಲ್ಲರ ಕಣ್ಣು!

ಈಗ ಮುಂದಿರುವುದು ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಹಾಗೂ ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್'​ ಸಿನಿಮಾ.

ಫ್ಯಾನ್ಸ್ ಭರವಸೆ

ಖಂಡಿತವಾಗಿ ಈ ಚಿತ್ರ ಪ್ರಭಾಸ್​ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡಬಹುದು ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.

ಕಥೆ ಆಯ್ಕೆಯಲ್ಲಿ ಎಡವುತ್ತಿದ್ದಾರಾ ಪ್ರಭಾಸ್​?

ಅತೀ ಮುಖ್ಯವಾಗಿ ಕಥೆಯ ಆಯ್ಕೆಯಲ್ಲಿ ಪ್ರಭಾಸ್​ ತಪ್ಪು ಮಾಡ್ತಿದ್ದಾರಾ? ಎಂಬ ಅನುಮಾನ, ಗೊಂದಲಗಳು ಕಾಡಲಾರಂಭಿಸಿವೆ.

'ಸ್ಪಿರಿಟ್'​ ಮೇಲೆ ದುಪ್ಪಟ್ಟು ನಿರೀಕ್ಷೆ

ಬಹುನಿರೀಕ್ಷಿತ 'ಸ್ಪಿರಿಟ್'​ನಲ್ಲಿ ನಟನ ಚಿತ್ರ ಗೆಲ್ಲಲಿ, ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂಬ ಹೆಬ್ಬಯಕೆ ಪ್ರಭಾಸ್ ಫ್ಯಾನ್ಸ್​ಗಳದ್ದು