ವೆಸ್ಟರ್ನ್ ಹಾಗೂ ಮಾಡರ್ನ್ ಉಡುಪುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪೂಜಾ, ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಮಡು ಸಾಂಪ್ರದಾಯಿಕ ಕುರ್ತಾ ಧರಿಸಿ, ಕಿವಿಗೆ ಫಿಶ್ ಓಲೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ
ಬಿಡುವಿಲ್ಲದೆ ನಟನೆ
ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಬಿಡುವಿಲ್ಲದ ನಟಿಸುತ್ತಿರುವ ಪೂಜಾ ಹೆಗ್ಡೆ ಸದ್ಯ ಸ್ಯಾಂಡಲ್ವುಡ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.
ಟ್ಯಾಂಗರಿನ್ ಸಿನಿಮಾ ಮೆಚ್ಚಿಕೊಂಡ ಕನ್ನಡತಿ
ಟ್ಯಾಂಗರಿನ್ ಸಿನ್-ಡಿ ರೆಲ್ಲಾ ಎನ್ನುವ ಸಿನಿಮಾ ಬಗ್ಗೆ ಪೂಜಾ ಹೆಗ್ಡೆ ಹಾಡಿ ಹೊಗಳಿದ್ದರು. ಇದಕ್ಕೆ ಸಿನಿಮಾದ ನಿರ್ದೇಶಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವರ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಹಂಚಿಕೊಂಡಿದ್ದಾರೆ.
ಪೂಜಾ ಸಿನಿಮಾಗಳಿವು
ಇತ್ತೀಚೆಗೆ ವರುಣ್ ಧವನ್ ಮತ್ತು ಮೃಣಾಲ್ ಠಾಕೂರ್ ಜೊತೆ ನಟಿಸಿರುವ ' ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ರಿಲೀಸ್ ಆಗಿತ್ತು. ತಮಿಳುನಾಡಿನ ಸಿಎಂ ವಿಜಯ್ ಜೊತೆ ನಟಿಸಿರುವ ಜನ ನಾಯಗನ್' ಇನ್ನಷ್ಟೇ ರಿಲೀಸ್ ಆಗಬೇಕಿದೆ.
ಮುಂದಿನ ಪ್ರಾಜೆಕ್ಟ್ ಲಿಸ್ಟ್ ಹೀಗಿದೆ
ರಾಘವ ಲಾರೆನ್ಸ್ ಜೊತೆ 'ಕಾಂಚನಾ 4' ಮತ್ತು ದುಲ್ಕರ್ ಸಲ್ಮಾನ್ ಜೊತೆ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರ ಎನ್ನಲಾಗಿದೆ