2024ರಲ್ಲಿ ಸಂಭಾವನೆ ವಿಚಾರದಿಂದ ಅವಕಾಶಗಳಿಂದ ದೂರ ಉಳಿದಿದ್ದ ಸೌತ್ ಬ್ಯೂಟಿ, ಈಗ ತಮ್ಮ ಪೇಮೆಂಟ್ ವಿಚಾರದಲ್ಲಿ ಕೊಂಚ ಸಡಿಲವಾಗಿದ್ದಾರೆ.ಕಾಲಿವುಡ್ನ ಹಿರಿಯ ನಟ ರಜಿನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ಮೋನಿಕಾ ಆಗಿ ಮನಬಿಚ್ಚಿ ಕುಣಿದ ಪೂಜಾ ಹೆಗ್ಡೆ.ಮುಂದಿನ ಚಿತ್ರಗಳತ್ತ ಬಿಜಿಯಾಗಿರುವ ಪೂಜಾ, ಇದಕ್ಕೂ ಮೊದಲು ಸರಣಿ ಫ್ಲಾಪ್ನಿಂದ ಅವಕಾಶಗಳಿಂದ ದೂರ ಉಳಿದಿದ್ದರು.ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಪೂಜಾ ಎಂಬ ವದಂತಿಗಳು ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.'ಆಲಾ ವೈಕುಂಠಪುರಂ' ಹಿಟ್ ಬೆನ್ನಲ್ಲೇ ಸಂಭಾವನೆಯನ್ನು 1.5 ಕೋಟಿಯಿಂದ 3 ಕೋಟಿಗೆ ಬೇಡಿಕೆಯಿಟ್ಟರು ಪೂಜಾ.ಇದು ಅವರಿಗೆ ಅವಕಾಶಗಳ ಕೊರೆತೆ ಹೆಚ್ಚಿಸಿತು. 2024ರಲ್ಲಿ 'ಗುಂಟೂರು ಕಾರಂ' ಚಿತ್ರ ಕೈತಪ್ಪಿದ್ದು ಸಂಭಾವನೆ ವಿಚಾರಕ್ಕೆ.ತಮಿಳಿನ ಜನನಾಯಗನ್ ಮತ್ತು ರೆಟ್ರೋ ಚಿತ್ರಗಳಿಗೆ ಹೋಲಿಸಿದರೆ, ಈ ಸಂಭಾವನೆ ಕಡಿಮೆಯೇ.'ರೆಟ್ರೋ' ಚಿತ್ರಕ್ಕೆ ಪೂಜಾ 4 ಕೋಟಿ ರೂ. ತೆಗೆದುಕೊಂಡಿದ್ದು, ಜನನಾಯಗನ್ ಸಿನಿಮಾಗೆ 6 ಕೋಟಿ ರೂ. ಪಡೆದಿದ್ದಾರೆ