ಪೂಜಾ ಹಾಟ್​ ಅವತಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಪೂಜಾ ಹಾಟ್​ ಅವತಾರ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಗ್ಲಾಮರ್​ ಗೊಂಬೆಯಾಗಿ ತಮ್ಮದೇಯಾದ ಚಾಪು ಮೂಡಿಸಿರುವ ಪೂಜಾ ಹೆಗ್ಡೆ, ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಿಕಿನಿ ಫೋಟೋಗಳು ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಸ್ಟಾರ್​ ನಾಯಕಿಯಾಗಿ ಮಿಂಚು

ತಮ್ಮ ಸೌಂದರ್ಯ ಹಾಗೂ ನಟನಾ ಕೌಶಲ್ಯದಿಂದ ಸ್ಟಾರ್ ಹೀರೋಗಳ ಎದುರು ನಟಿಸುವ ಮೂಲಕ ಬಹಳ ಕಡಿಮೆ ಸಮಯದಲ್ಲೇ ಸ್ಟಾರ್​ ನಾಯಕಿಯಾಗಿ ಪೂಜಾ ಮಿಂಚಿದರು. ಇಂದಿಗೂ ಮಿಂಚುತ್ತಲೇ ಇದಾರೆ.

ಸಾಲು ಸಾಲು ಸೋಲು

ಅಲಾ ವೈಕುಂಠಪುರಂ ಮತ್ತು ದುವ್ವಾಡ ಜಗನ್ನಾಧಮ್‌ನಂತಹ ಚಿತ್ರಗಳಲ್ಲಿ ಭಾರಿ ಯಶಸ್ಸನ್ನು ಕಂಡ ಪೂಜಾ ಹೆಗ್ಡೆ ಇತ್ತೀಚೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಪ್ರತಿಯೊಂದು ಚಿತ್ರವೂ ಸೋಲು ಕಂಡಿದೆ.

ಜನನಾಯಗನ್​ ಮೇಲೆ ನಿರೀಕ್ಷೆ

ಪೂಜಾ ಅವರು ವಿಜಯ್ ನಟನೆಯ ಜನನಾಯಗನ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಮತ್ತೊಂದೆಡೆ, ಹಿಂದಿಯಲ್ಲೂ ಬಿಜಿಯಾಗಿದ್ದಾರೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿವೆ.

ಬಿಕಿನಿ ಸೆಲ್ಫಿ

ಇತ್ತೀಚೆಗೆ ಪೂಜಾ ಅವರು ಬಿಕಿನಿಯಲ್ಲಿ ಸೆಲ್ಫಿಗಳನ್ನು ಪೋಸ್ಟ್ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಬಿಕಿನಿ ಫೋಟೋಗಳನ್ನು ನೋಡಿದ ನಂತರ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಗ್ಲಾಮರ್​ ಗೊಂಬೆ ಪೂಜಾ

ನಿಜಕ್ಕೂ ಪೂಜಾ ಹೆಗ್ಡೆ ಅವರು ಗ್ಲಾಮರ್​ ಗೊಂಬೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಪೂಜಾ ಅವರ ಮೈಮಾಟವನ್ನು ಫ್ಯಾನ್ಸ್​ ಹೊಗಳುತ್ತಿದ್ದಾರೆ.