ಬಂಡೀಪುರ ಟು ಬೆಂಗಾಲ್‌; ಪ್ರಧಾನಿ ಮೋದಿ ಫೋಟೋಗ್ರಾಫಿಗೆ ಸಾಕ್ಷಿಯಾದ ಐತಿಹಾಸಿಕ ಕ್ಷಣಗಳಿವು! | PM Modi Photography

ಮಣಿಕಂಠ ಪಾ ಹಿರೇಮಠ

ಬಂಡೀಪುರ ಟು ಬೆಂಗಾಲ್‌; ಪ್ರಧಾನಿ ಮೋದಿ ಫೋಟೋಗ್ರಾಫಿಗೆ ಸಾಕ್ಷಿಯಾದ ಐತಿಹಾಸಿಕ ಕ್ಷಣಗಳಿವು! | PM Modi Photography

ರಾಜ್ಯ ಭೇಟಿಗಳು ಮತ್ತು ಅಧಿಕೃತ ಕಾರ್ಯಕ್ರಮಗಳ ನಡುವೆ ಪ್ರಧಾನಿ ಮೋದಿ ಅವರ ಕೈಯಲ್ಲಿ ಕ್ಯಾಮೆರಾ ಕಂಡುಬರುವುದು ಈಗ ಸಾಮಾನ್ಯ ದೃಶ್ಯ. ವೇದಿಕೆಯ ಕೇಂದ್ರಬಿಂದುವಾಗಿದ್ದರೂ, ಕೆಲವೊಮ್ಮೆ ಕ್ಯಾಮರಾ ಹಿಂದೆ ನಿಂತು ಫೋಟೋ ಕ್ಲಿಕ್ಕಿಸುವುದು ಇವರ ಹಳೆಯ ಹವ್ಯಾಸ.

ಕುನೋ ನ್ಯಾಷನಲ್ ಪಾರ್ಕ್ (2022)

ಸೆಪ್ಟೆಂಬರ್ 17, 2022 ರಂದು ನಮೀಬಿಯಾದಿಂದ ಬಂದ ಚಿರತೆಗಳನ್ನು ಬಿಡುಗಡೆ ಮಾಡಿದ ನಂತರ, ಮೋದಿ ಅವರು ಸ್ವತಃ ಕ್ಯಾಮೆರಾ ಹಿಡಿದು ಆ ಚಿರತೆಗಳ ಚಿತ್ರಗಳನ್ನು ಸೆರೆಹಿಡಿದರು. ಏಳು ದಶಕಗಳ ನಂತರ ಭಾರತಕ್ಕೆ ಮರಳಿದ ಈ ಪ್ರಭೇದಗಳ ಸ್ವಾಗತಕ್ಕೆ ಇದೊಂದು ವೈಯಕ್ತಿಕ ಸ್ಪರ್ಶವಾಗಿತ್ತು.

ಬಂಡೀಪುರ ಹುಲಿ ಅಭಯಾರಣ್ಯ (2023)

'ಪ್ರಾಜೆಕ್ಟ್ ಟೈಗರ್'ನ 50 ವರ್ಷಗಳ ಸಂಭ್ರಮದ ಅಂಗವಾಗಿ ಕರ್ನಾಟಕದ ಬಂಡೀಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ, ಅರಣ್ಯದ ನಡುವೆ ಸಫಾರಿ ನಡೆಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಕಾಜಿರಂಗ ನ್ಯಾಷನಲ್ ಪಾರ್ಕ್ (2024)

ಮಾರ್ಚ್ 9, 2024 ರಂದು ಅಸ್ಸಾಂನ ಕಾಜಿರಂಗಕ್ಕೆ ಭೇಟಿ ನೀಡಿದ ಮೋದಿ, ಮುಂಜಾನೆಯ ಜೀಪ್ ಸಫಾರಿ ವೇಳೆ ಒಂಟಿ ಕೊಂಬಿನ ಖಡ್ಗಮೃಗಗಳು ಮತ್ತು ಜೌಗು ಪ್ರದೇಶದ ಜೀವವೈವಿಧ್ಯತೆಯನ್ನು ವಿಶೇಷ ಆಸಕ್ತಿಯಿಂದ ದಾಖಲಿಸಿದರು.

ಗಿರ್ ವನ್ಯಜೀವಿ ಧಾಮ

2025ರ ವಿಶ್ವ ವನ್ಯಜೀವಿ ದಿನದಂದು ಏಷ್ಯಾಟಿಕ್ ಸಿಂಹಗಳ ಏಕೈಕ ನೆಲೆ 'ಗಿರ್' ಗೆ ಭೇಟಿ ನೀಡಿದ -ಪ್ರಧಾನಿ ಮೋದಿ, ತಮ್ಮ ತವರು ರಾಜ್ಯದ ಹೆಮ್ಮೆಯ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣಾ ಪ್ರಯತ್ನಗಳನ್ನು ಹತ್ತಿರದಿಂದ ವೀಕ್ಷಿಸಿ ಫೋಟೋ ತೆಗೆದರು.

ಹೂಗ್ಲಿ ನದಿಯ ತೀರದಲ್ಲಿ...

ಇತ್ತೀಚೆಗೆ (ಏಪ್ರಿಲ್ 24, 2026) ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆಯೂ, ಮೋದಿ ಹೂಗ್ಲಿ ನದಿಯಲ್ಲಿ ದೋಣಿ ಸವಾರಿ ಮಾಡುತ್ತಾ ಕೋಲ್ಕತ್ತಾದ ಸೇತುವೆಗಳು, ಘಾಟ್‌ಗಳು ಮತ್ತು ದೈನಂದಿನ ಜೀವನದ ಅಪರೂಪದ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.