ಮಹಿಳಾ ವಿಶ್ವಕಪ್ ಚಾಂಪಿಯನ್ಸ್​​​​​ ಜೊತೆ ಪ್ರಧಾನಿ ಮೋದಿ

ಭಾವನಾ ಪ್ರಭಾಕರ್​​​​

ಮಹಿಳಾ ವಿಶ್ವಕಪ್ ಚಾಂಪಿಯನ್ಸ್​​​​​ ಜೊತೆ ಪ್ರಧಾನಿ ಮೋದಿ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನವೆಂಬರ್ 5ರಂದು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಪ್ರಧಾನಿಗೆ 'ನಮೋ' ಎಂದು ಬರೆದ ಜೆರ್ಸಿ ಕೊಟ್ಟ ಟೀಮ್​​

ತಂಡವು ಪ್ರಧಾನಿಗೆ 'ನಮೋ' ಬರೆದ ಜೆರ್ಸಿಯನ್ನು ಆಟಗಾರ್ತಿಯರ ಸಹಿಗಳೊಂದಿಗೆ ನೀಡಿತು. ಹರ್ಮನ್‌ಪ್ರೀತ್ ಕೌರ್ 2017ರ ರನ್ನರ್‌-ಅಪ್ ಭೇಟಿಯನ್ನು ನೆನಪಿಸಿಕೊಂಡು, "ಈ ಬಾರಿ ಟ್ರೋಫಿಯೊಂದಿಗೆ ಬಂದಿದ್ದೇವು, ಮತ್ತಷ್ಟು ಭೇಟಿಗಳು ನಡೆಯಲಿ" ಎಂದು ಹೇಳಿದರು.

ನಾರಿಮಣಿಗಳ ಶಕ್ತಿ ವಿಶ್ವಕ್ಕೆ ಮಾದರಿ

ಇದು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ವಿಶ್ವಕಪ್ ಟ್ರೋಫಿ ಗೆದ್ದ ನಂತರದ ಔಪಚಾರಿಕ ಭೇಟಿಯಾಗಿದ್ದು, ದೇಶಾದ್ಯಂತದ ಯುವತಿಯರಿಗೆ ಸ್ಫೂರ್ತಿಯಾಗಿದೆ.

ತಂಡಕ್ಕೆ ಪ್ರಧಾನಿ ಪ್ರಶಂಸೆ

ನವಿ ಮುಂಬೈಯ ಡಾ. ಡಿವಿಯೇ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ವಿಶ್ವ ಚಾಮ್ಪಿಯನ್ ಆಯಿತು. ಪಿಎಂ ಮೋದಿ ತಂಡದ ಧೈರ್ಯ, ತಾಳ್ಮೆ ಮತ್ತು ಮಾನಸಿಕ ಬಲವನ್ನು ಪ್ರಶಂಸಿಸಿ, "ಮೂರು ಸೋಲುಗಳ ನಂತರದ ಕಮ್‌ಬ್ಯಾಕ್ ತಂಡದ ಐಕ್ಯತೆಯ ಸಾಕ್ಷಿ. ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಅನ್ನು ಮೋಟಿವೇಷನ್‌ಗೆ ತಿರುಗಿಸಿದ್ದೀರಿ" ಎಂದರು.

ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಹಿ ಹಂಚಿದ ಪ್ರಧಾನಿ

ಕೊನೆಯಲ್ಲಿ ದೇಶವೇ ಮೆಚ್ಚುವ ಸಾಧನೆ ಮಾಡಿದ ನಾರಿಮಣಿಯರಿಗೆ ಸಿಹಿ ಹಂಚಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುತ್ತ ಸಂತೋಷದ ಕಾಲ ಕಳೆದರು..