ಇಂಡೋನೇಷ್ಯಾದ ಶಿವ ದೇವಾಲಯಕ್ಕೆ ನಮೋ ಭೇಟಿ..

ಮಮತಾ

ಇಂಡೋನೇಷ್ಯಾದ ಶಿವ ದೇವಾಲಯಕ್ಕೆ ನಮೋ ಭೇಟಿ..

ಯುನೆಸ್ಕೋದಿಂದ ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣವಾದ ಇಂಡೋನೇಷ್ಯಾದ ಪ್ರಂಬನನ್​ ದೇಗುಲಕ್ಕೆ ಪ್ರಧಾನಿ ಭೇಟಿ ನೀಡಿದ್ದಾರೆ. ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ದೇಗಲುದ ವಿಶೇಷತೆ ಹಾಗೂ ಕೆತ್ತನೆಯೂ ಹಲವು ಸಕರಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ.

ಸಾವಿರ ವರ್ಷದ ಹಳೆಯ ದೇಗುಲ

ಸಾವಿರ ವರ್ಷದ ಹಳೆಯ ಇತಿಹಾಸ ಹೊಂದಿರುವ ಈ ದೇಗುಲವು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನಿಗೆ ಸಮರ್ಪಿತವಾಗಿ ಎಂದು ನಂಬಲಾಗಿದೆ, ಪ್ರಂಬನನ್​​ ದೇವಾಲಯವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಪ್ರಧಾನಿ ಮೋದಿ ಪ್ರಂಬನನ್​ಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು.

ನನ್ನ ಸೌಭಾಗ್ಯವಿದು

ಮಹೇಶ್ವರನೊಂದಿಗೆ ಸಂಪರ್ಕ ಹೊಂದಲು ನನಗೆ ಈ ಜಾಗ ಪ್ರತಿ ಬಾರಿಯು ಅವಕಾಶ ಸಿಗುತ್ತಿರುವುದು ನನ್ನ ಸೌಭಾಗ್ಯ ಹಟಕೇಶ್ವರ ಮಹಾದೇವ ನೆಲೆಸಿರುವ ವಡ್‌ನಗರದಲ್ಲಿ ನಾನು ಜನಿಸಿದೆ. ಇನ್ನು ಸೋಮನಾಥ ಜ್ಯೋತಿರ್ಲಿಂಗವು ಮೊದಲ ಜ್ಯೋತಿರ್ಲಿಂಗವಾಗಿದ್ದು, ಅದು ಗುಜರಾತ್‌ನಲ್ಲಿದೆ. ಅದರ ಅಭಿವೃದ್ಧಿಯ ನೇರ ಜವಾಬ್ದಾರಿ ನನಗಿದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಜೀರ್ಣೋದ್ಧಾರ ಕಾರ್ಯಕ್ಕೆ ಅವಕಾಶ ಸಿಕ್ಕಿದೆ

ನನ್ನ ರಾಜಕೀಯ ಕ್ಷೇತ್ರವಾದ ಕಾಶಿಯಲ್ಲಿ (ವಾರಣಾಸಿ) ಕಾಶಿ ವಿಶ್ವನಾಥ ಮಹಾದೇವನಿದ್ದು, ಆತ ನನಗೆ ನಿರಂತರವಾಗಿ ಆಶೀರ್ವಾದ ಮಾಡುತ್ತಲೇ ಬಂದಿದ್ದಾನೆ. ಕೇದಾರನಾಥದ ಪುನರಾಭಿವೃದ್ಧಿಯೇ ಇರಲಿ, ಉಜ್ಜಯಿನಿಯ ಮಹಾಕಾಲನ ಪುನರಾಭಿವೃದ್ಧಿಯೇ ಇರಲಿ, ಅಥವಾ ನನ್ನ ಇಂದಿನ ಈ ಭೇಟಿಯೇ ಇರಲಿ, ಇಲ್ಲಿನ ಜೀರ್ಣೋದ್ಧಾರ ಕಾರ್ಯವನ್ನು ಪ್ರಾರಂಭಿಸುವ ಅವಕಾಶ ನನಗೆ ಸಿಕ್ಕಿದೆ. ಇದನ್ನು ನಾನು ನನ್ನ ದೊಡ್ಡ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಅತಿ ದೊಡ್ಡ ಹಿಂದೂ ದೇವಾಲಯ

ಪ್ರಂಬನನ್ ದೇವಾಲಯವು ಇಂಡೋನೇಷ್ಯಾದ ಹಳೆಯ ದೇವಾಲಯ ಮತ್ತು ಇದು ಅತಿದೊಡ್ಡ ದೇವಾಲಯ ಎಂದು ಕರೆಸಿಕೊಳ್ಳಲಾಗಿದೆ. ಇಲ್ಲಿ 240 ದೇವಾಲಯವಿದೆ ಎನ್ನಲಾಗಿದೆ.ದೇವಾಲಯದ ಗೋಡೆಯ ಮೇಲೆ ರಾಮಾಯಣ ಕತೆಗಳನ್ನು ಕೆತ್ತನೆ ಮಾಡಲಾಗಿದೆ.

ನಿತ್ಯ ಪೊಜೆ ಸಮರ್ಪಣೆ

ಪ್ರಂಬನನ್​​ ದೇವಾಲಯದಲ್ಲಿ ನಿತ್ಯ ಸೂರ್ತ, ರೈನ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹಿಂದೂ ಧರ್ಮದಂತೆ ಪೂಜಾ ಕೈಂಕರ್ಯ ನಡೆಯುತ್ತದೆ. ತ್ರಿಮೂರ್ತಿಗಳಿಗೆ ವಿಶೇಷವಾದ ಶ್ಲೋಕ ಇರುತ್ತದೆ ಎಂದು ಯುನೋಸ್ಕೋದ ವೆಬ್​ಸೈಟ್​​ನಲ್ಲಿ ಬರೆದುಕೊಳ್ಳಲಾಗಿದೆ.