ಐಪಿಎಲ್​ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರು

ವಿನಾಯಕ ನಾಯಕ

ಐಪಿಎಲ್​ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರು

ಐಪಿಎಲ್​ ಇದು ದಾಂಡಿಗರ ಕ್ರೇಂದ್ರಿಕೃತ ಟೂನyರ್ನಿಯಾಗಿದ್ದು, ಇಲ್ಲಿ ಸಿಕ್ಸ್​ ಮತ್ತು ಫೋರ್​ಗಳ ಸುರಿಮಳೆಯನ್ನು ನಾವು ನೋಡುತ್ತೇವೆ. ಐಪಿಎಲ್​ನಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ಪಟ್ಟಿ ಇಲ್ಲಿದೆ.

ಶಿಖರ್ ಧವನ್

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಫೋರ್ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಇವರು ಬೌಂಡರಿ ಮೆಷಿನ್ ಎಂದೇ ಖ್ಯಾತರಾಗಿದ್ದಾರೆ. ಇವರು ಇಲ್ಲಿವರೆಗೆ ಸುಮಾರು 768 ಬೌಡಂರಿ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ

ಆರ್ ಸಿ ಬಿ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು 705 ಫೋರ್‌ಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಕೇವಲ ಸಿಕ್ಸರ್ ಮೇಲೆ ಅವಲಂಬಿತವಾಗದೆ, ಕ್ಲಾಸಿಕ್ ಫೋರ್‌ಗಳ ಮೂಲಕ ರನ್ ಕಲೆಹಾಕುತ್ತಾರೆ.

ಡೇವಿಡ್ ವಾರ್ನರ್

ವಿದೇಶಿ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಅತ್ಯಂತ ಸ್ಥಿರವಾಗಿ ರನ್ ಗಳಿಸುವ ಬ್ಯಾಟರ್ ಆಗಿದ್ದು, ಹೈದರಾಬಾದ್ ಮತ್ತು ಡೆಲ್ಲಿ ತಂಡಗಳ ಪರವಾಗಿ 663 ಬೌಂಡರಿಗಳನ್ನು ಸಿಡಿಸಿದ್ದಾರೆ.

ರೋಹಿತ್ ಶರ್ಮಾ

ಸಿಕ್ಸರ್‌ಗಳ ಜೊತೆಗೆ ಬೌಂಡರಿ ಬಾರಿಸುವುದರಲ್ಲೂ ರೋಹಿತ್ ಶರ್ಮಾ ಹಿಂದೆ ಬಿದ್ದಿಲ್ಲ. ಇವರು 599 ಬೌಂಡರಿಗಳನ್ನು ಬಾರಿಸಿದ್ದು ಸದ್ಯದಲ್ಲೇ 600 ಫೋರ್‌ಗಳ ಮೈಲಿಗಲ್ಲನ್ನು ತಲುಪಲಿದ್ದಾರೆ.

ಸುರೇಶ್​ ರೈನಾ

ಮಿಸ್ಟರ್​ ಐಪಿಎಲ್​ ಖ್ಯಾತಿಯ ಸುರೇಶ್​ ರೈನಾ ತಮ್ಮ ಕ್ಲಾಸಿಕ್​ ಶಾಟ್​ಗಳ ಮೂಲಕ ಇಲ್ಲಿವರೆಗೆ ಸುಮಾರು 506 ಬೌಂಡರಿಗಳನ್ನು ಹೊಡೆಯುವ ಮೂಲಕ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.