ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಡಕ್​ಔಟ್​ ಆದ ಆಟಗಾರರು

ವಿನಾಯಕ ನಾಯಕ

ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಡಕ್​ಔಟ್​ ಆದ ಆಟಗಾರರು

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್​ ಆರಂಭವಾಗಲಿದೆ. ಐಪಿಎಲ್​ ಎಂದರೆ ಅದು ಹೊಡಿಬಡಿಯಾಟ. ಇಲ್ಲಿ ಹೆಚ್ಚು ರನ್​ ಗಳಿಸಿದರೆ ಮಾತ್ರ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಆದರೆ ಹೀಗೆ ಹೆಚ್ಚು ರನ್​ಗಳಿಸುವ ಆತುರದಲ್ಲಿ ಬ್ಯಾಟರ್​ಗಳು ಬೇಗ ಔಟಾಗುವ ಸಂಭವ ಸಹ ಇರುತ್ತದೆ. ಇಂದು ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಅಂದರೆ ಡಕ್​ಔಟ್​ ಆದವರ ಪಟ್ಟಿ ಇಲ್ಲಿದೆ.

ಗ್ಲೇನ್​ ಮ್ಯಾಕ್ಸ್​ವೆಲ್​

ಆಸ್ಟ್ರೆಲೀಯಾದ ಸ್ಪೋಟಕ ಬ್ಯಾಟರ್​ ಗ್ಲೇನ್​ ಮ್ಯಾಕ್ಸ್​ವೆಲ್​ ತಾನು ಸಿಡಿಸುವ ಬೌಂಡರಿಗಳ ಮೂಲಕವೇ ಖ್ಯಾತಿಗಳಿಸಿದ್ದಾರೆ. ಐಪಿಎಲ್​ನಲ್ಲಿ ಇವರು ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದು ಇಲ್ಲಿವರೆಗೆ ಇವರು 19 ಬಾರಿ ಡಕ್​ಔಟ್ ಆಗಿದ್ದಾರೆ.

ದಿನೇಶ್​ ಕಾರ್ತಿಕ್​

ಭಾರತ ತಂಡದ ಮಾಜಿ ವಿಕೆಟ್​ ಕೀಪರ್​-ಬ್ಯಾಟರ್ ದಿನೇಶ್​ ಕಾರ್ತಿಕ್​ ಇಲ್ಲಿವರೆಗೆ ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಕಣಕ್ಕಿಳಿದಿದ್ದು ಇಲ್ಲಿವರೆಗೆ ಇವರು 18 ಸಲ ಡಕ್​ಔಟ್ ಆಗಿದ್ದಾರೆ.

ರೋಹಿತ್​ ಶರ್ಮಾ

ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಐಪಿಎಲ್​ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು, ಇವರು ಈ ವರೆಗೆ 5 ಬಾರಿ ಐಪಿಎಲ್​ ಟ್ರೋಫಿ ಎತ್ತಿರುವ ಹೆಗ್ಗಳಿಕೆ ಇವರದ್ದಾಗಿದೆ. ರೋಹಿತ್​ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದು ಇವರು ಇಲ್ಲಿವರೆಗೆ 18 ಬಾರಿ ಡಕ್​ಔಟ್ ಆಗಿ ಪೆವಿಲಿಯನ್​ ಸೇರಿದ್ದಾರೆ.

ಸುನೀಲ್​ ನರೈನ್​

ಮಿಸ್ಟ್ರರಿ ಬೌಲರ್​ ಖ್ಯಾತಿನ ವೆಸ್ಟ್​ ಇಂಡೀಸ್​ ಆಟಗಾರ ಸುನೀಲ್​ ನರೈನ್​ ಕೇವಲ ತನ್ನ ಬೌಲಿಂಗ್​ ಮಾತ್ರವಲ್ಲ, ಬ್ಯಾಟಿಂಗ್​ ಮೂಲಕವು ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಇವರು 2012 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸದಸ್ಯರಾಗಿ ಮೈದಾನಕ್ಕಿಳಿದಿದ್ದು, ಇಲ್ಲಿಯವರೆಗೆ 17 ಸಲ ಡಕ್​ಔಟ್ ಆಗಿದ್ದಾರೆ.

ರಶೀದ್​ ಖಾನ್​

ತನ್ನ ಅಮೋಘವಾದ ಬೌಲಿಂಗ್​ ಪ್ರದರ್ಶನದ ಮೂಲಕ ಐಪಿಎಲ್​ನಲ್ಲಿ ಜನಜನಿತವಾಗಿರುವ ಅಫ್ಘಾನ್​ ಸ್ಪಿನ್ನರ್​ ರಶೀದ್​ ಖಾನ್​ ತಂಡ ವಿಪತ್ತಿನಲ್ಲಿದ್ದಾಗ ಬ್ಯಾಟ್​ ಬೀಸಿ ಹಲವು ಬಾರಿ ವಿಜಯವನ್ನು ತಂದು ಕೊಟ್ಟಿದ್ದಾರೆ. ರಶೀದ್ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದು ಇಲ್ಲಿಯವರೆಗೆ 16 ಬಾರಿ ಡಕ್​ಔಟ್ ಆಗಿದ್ದಾರೆ.