ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನಲೇಬೇಡಿ! Papaya
ಮಣಿಕಂಠ ಪಾ ಹಿರೇಮಠ
ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನಲೇಬೇಡಿ! Papaya
ಪಪ್ಪಾಯಿ ಪೌಷ್ಟಿಕಾಂಶದಿಂದ ಕೂಡಿರುವ ಹಣ್ಣಾಗಿದ್ದು, ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಅಲರ್ಜಿಗಳು, ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳನ್ನು ಉಂಟುಮಾಡಬಹುದು.
ಗರ್ಭಿಣಿ ಮಹಿಳೆಯರು
ಗರ್ಭಿಣಿ ಮಹಿಳೆಯರು ಮಾಗಿದ ಪಪ್ಪಾಯಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರಲ್ಲಿ ಲ್ಯಾಟೆಕ್ಸ್ ಮತ್ತು ಪಪೈನ್ ಇದ್ದು, ಇದು ಗರ್ಭಾಶಕ್ಕೆ ತೊಂದರೆ ಉಂಟು ಮಾಡಿ, ಅಕಾಲಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೃದಯದ ತೊಂದರೆ ಇರುವವರು
ಹೃದಯದ ತೊಂದರೆ ಅನುಭವಿಸುವವರು ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ತೊಂದರೆಯಾಗುವುದಿಲ್ಲ. ಆದರೆ ವಾರ್ಫರಿನ್ ಸೇವಿಸುತ್ತಿದ್ದರೆ, ರಕ್ತ ಗಟ್ಟಿಯಾಗುವಂತೆ ಮಾಡಿ, ಔಷಧದ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಅಲರ್ಜಿ ಸಮಸ್ಯೆ ಇರುವವರು
ಲ್ಯಾಟೆಕ್ಸ್ ಅಲರ್ಜಿ ಇರುವವರು ಪಪ್ಪಾಯಿ ಸೇವಿಸಿದರೆ “ಲ್ಯಾಟೆಕ್ಸ್-ಫ್ರೂಟ್ ಸಿಂಡ್ರೋಮ್” ಉಂಟಾಗುತ್ತದೆ. ಇದರಿಂದ ಬಾಯಿ ತುರಿಕೆ, ಗಂಟಲು ಉರಿ, ತುಟಿ-ನಾಲಿಗೆ ಊತ, ಚರ್ಮದಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ.
ಮೂತ್ರಪಿಂಡದ ಸಮಸ್ಯೆ ಇರುವವರು
ಪಪ್ಪಾಯಿಯಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿರುವುದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಹೆಚ್ಚು ರೂಪುಗೊಳ್ಳಬಹುದು. ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ.
ಹೊಟ್ಟೆಯ ಸಮಸ್ಯೆಯ ಜನರು
ಅಲ್ಸರ್, ಗ್ಯಾಸ್ಟ್ರೈಟಿಸ್, IBS, ಆಮ್ಲತೆ ಇರುವವರು ಹೆಚ್ಚು ಪ್ರಮಾಣದಲ್ಲಿ ಪಪ್ಪಾಯಿ ತಿನ್ನುವುದರಿಂದ ಎದೆಯಲ್ಲಿ ಉರಿಯುವುದು, ಆಮ್ಲೀಯತೆ, ನೋವು ಉಂಟು ಮಾಡುತ್ತದೆ. ಹಾಗಾಗಿ ಸೂಕ್ಷ್ಮ ಹೊಟ್ಟೆಯನ್ನು ಹೊಂದಿದ ಜನರು ಈ ಪಪ್ಪಾಯಿಯನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.