ಈ 5 ಖಾಯಿಲೆ ಇರುವವರು ತಪ್ಪಿಯೂ ಕಾಫಿ ಕುಡಿಯಬಾರದು

ವಿನಾಯಕ ನಾಯಕ

ಈ 5 ಖಾಯಿಲೆ ಇರುವವರು ತಪ್ಪಿಯೂ ಕಾಫಿ ಕುಡಿಯಬಾರದು

ಕಾಫಿ ಜಗತ್ತಿನ ನೆಚ್ಚಿನ ಪಾನೀಯವಾದರೂ, ಎಲ್ಲರ ಆರೋಗ್ಯಕ್ಕೂ ಇದು ಸೂಕ್ತವಲ್ಲ. ವಿಶೇಷವಾಗಿ ಅಲ್ಸರ್, ಹೈ ಬಿಪಿ, ನಿದ್ರಾಹೀನತೆ, ಹೃದಯದ ಕಾಯಿಲೆ ಮತ್ತು ಕರುಳಿನ ಸಮಸ್ಯೆ (IBS) ಇರುವವರು ಕಾಫಿಯಿಂದ ದೂರವಿರಬೇಕು. ಇದರಲ್ಲಿನ ಕೆಫೀನ್ ಈ 5 ಕಾಯಿಲೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.

ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ

ಕಾಫಿಯಲ್ಲಿ ಆಮ್ಲೀಯತೆ ಹೆಚ್ಚಾಗಿರುತ್ತದೆ. ಇದು ಹೊಟ್ಟೆಯಲ್ಲಿ ಆಸಿಡ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ತೀವ್ರವಾದ ಗ್ಯಾಸ್ಟ್ರಿಕ್, ಎದೆಯುರಿ ಅಥವಾ ಹೊಟ್ಟೆಯ ಅಲ್ಸರ್ ಇರುವವರು ಕಾಫಿ ಕುಡಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ಹೊಟ್ಟೆ ನೋವು ಹೆಚ್ಚಾಗಬಹುದು.

ಅಧಿಕ ರಕ್ತದೊತ್ತಡ

ಕಾಫಿಯಲ್ಲಿರುವ ಕೆಫೀನ್ ಅಂಶವು ರಕ್ತದೊತ್ತಡವನ್ನು ತಕ್ಷಣವೇ ಹೆಚ್ಚಿಸುವ ಗುಣ ಹೊಂದಿದೆ. ಈಗಾಗಲೇ ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಕಾಫಿ ಕುಡಿಯುವುದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗಿ, ಹೃದಯಾಘಾತದಂತಹ ಅಪಾಯಗಳು ಎದುರಾಗಬಹುದು.

ನಿದ್ರಾಹೀನತೆ

ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರದಿದ್ದರೆ ಅಥವಾ ಸಣ್ಣ ವಿಷಯಕ್ಕೂ ಅತಿಯಾಗಿ ಆತಂಕ, ಧೀಡಿರ್ ನಡುಕ ಉಂಟಾಗುತ್ತಿದ್ದರೆ ಕಾಫಿ ಕುಡಿಯುವುದನ್ನು ತಕ್ಷಣ ನಿಲ್ಲಿಸಿ. ಕೆಫೀನ್ ಮೆದುಳನ್ನು ಸದಾ ಜಾಗೃತವಾಗಿರಿಸುವುದರಿಂದ ನಿದ್ದೆ ಸಂಪೂರ್ಣವಾಗಿ ದೂರವಾಗುತ್ತದೆ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತದೆ.

ಹೃದಯ ಬಡಿತದ ಸಮಸ್ಯೆ

ಕೆಲವರಿಗೆ ಹೃದಯದ ಬಡಿತ ಸಾಮಾನ್ಯಕ್ಕಿಂತ ವೇಗವಾಗಿ ಅಥವಾ ಅಸಮರ್ಪಕವಾಗಿ ಇರುತ್ತದೆ. ಕಾಫಿ ಕುಡಿದ ತಕ್ಷಣ ಕೆಫೀನ್ ರಕ್ತದ ಹರಿವನ್ನು ವೇಗಗೊಳಿಸಿ ಹೃದಯದ ಬಡಿತವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಇದು ಹೃದಯದ ಕಾಯಿಲೆ ಇರುವವರಿಗೆ ಅಪಾಯಕಾರಿ

ಕರುಳಿನ ಕಾಯಿಲೆ

ಐಬಿಎಸ್ ಅಥವಾ ಅತಿ ಸಡಿಲವಾದ ಕರುಳಿನ ಸಮಸ್ಯೆ ಇರುವವರಿಗೆ ಕಾಫಿ ವಿಷದಂತೆ ಕೆಲಸ ಮಾಡಬಹುದು. ಕಾಫಿ ಜೀರ್ಣಾಂಗ ವ್ಯವಸ್ಥೆಯನ್ನು ಅತಿಯಾಗಿ ಉತ್ತೇಜಿಸುವುದರಿಂದ ಪದೇ ಪದೇ ಬೇಧಿ ಅಥವಾ ಹೊಟ್ಟೆ ಉಬ್ಬರ ಉಂಟಾಗುತ್ತದೆ.