ಪಾಯಲ್ ರಜಪೂತ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಶೂಟ್ ಪಟಗಳನ್ನು ಹಂಚಿಕೊಂಡಿದ್ದಾರೆ. ದೇವಕನ್ಯೆಯಂತೆ ಹರಿಬಿಟ್ಟ ಕೂದಲು. ದೇಹದ ಬಲಭಾಗದಲ್ಲಿ ಕೇಶಕ್ಕೆ ಮುಡಿದ ಕಮಲ, ಜೋತು ಬೀಳುವ ಮಾಡಿಗಳು, ಇಬ್ಬನಿಯಂತ ಮೇಕಪ್ ಕೆನ್ನೆಯ ಮೇಲೆ ಹೂವಿನ ಚಿತ್ತಾರವು ಸ್ವರ್ಗದಿಂದ ಧರೆಗೆ ಇಳಿದ ದೇವಕನ್ಯೆಯ ಪ್ರತಿರೂಪದಂತೆ ಕಂಡರು.
ಲಾಸ್ಟ್ ಇನ್ ಪಾಸ್ಟಲ್ ಡ್ರೀಮ್
ಲಾಸ್ಟ್ ಇನ್ ಪಾಸ್ಟಲ್ ಡ್ರೀಮ್ ಅಂದರೆ ಗಾಢವಲ್ಲದ ತಿಳಿ ಬಣ್ಣಗಳ ಜೊತೆ ಬೆರೆತೆ ಮೈಮರೆತಿರುವುದು ಎಂಬರ್ಥದಲ್ಲಿ ನಟಿ ಪಾಯಲ್ ತಮ್ಮ ಪೋಸ್ಟ್ಗೆ ಶೀರ್ಷಿಕೆ ಕೊಟ್ಟಿದ್ದಾರೆ. ಪಾಯಲ್ ಅವರ ಒಂದೊಂದು ಪಟಕ್ಕೂ ಮನಸೋತ ಅಭಿಮಾನಿಗಳು ಪ್ರಿನ್ಸಸ್ ಪಾಯಲ್, ಬ್ಯೂಟಿಫುಲ್, ನನ್ನ ಚಂದಮಾಮಾ, ಪ್ರೇಯಸಿ ಎಲ್ಲ ನೀನು ಎಂದು ಭಗ್ನ ಪ್ರೇಮಿಯೊಬ್ಬರು ಅವರಿಗೆ ಕಾಮೆಂಟ್ ಮಾಡಿದ್ದಾರೆ.
ವೃತ್ತಿ ಜೀವನ ಆರಂಭಿಸಿದ್ದು ಹೀಗೆ
ಸಪ್ನೋನ್ ಭರೆ ನೈನಾ ಮೂಲಕ ವೃತ್ತಿ ಜೀವನ ಆರಂಭಿಸಿದ ಪಾಯಲ್ ರಜಪೂತ್ ಹೆಚ್ಚು ಜೀವನ ಕಂಡುಕೊಂಡಿದ್ದು ಟಾಲಿವುಡ್ನಲ್ಲಿ. ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಸಹ ಟಾಲಿವುಡ್ ಸಿನಿಮಾ 'RX 100'.
'RX 100' ಸಿನಿಮಾ ಮೂಲಕ ಫೇಮಸ್
ಅಜಯ್ ಭೂಪತಿ ನಿರ್ದೇಶನದ 'RX 100' ಸಿನಿಮಾ 2018ರಲ್ಲಿ ಟಾಲಿವುಡ್ನಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿತ್ತು. ಪಾಯಲ್ ಹಾಗೂ ನಾಯಕನಟ ಕಾರ್ತಿಕೇಯಗೂ ಹಿಟ್ ಕೊಟ್ಟ ಸಿನಿಮಾ. ಈ ಸಿನಿಮಾ ನಂತರ ಅವರಿಗೆ ಸಾಕಷ್ಟು ಕಾಲ್ ಶೀಟ್ಗಳು ಬಂದವು.
ಈ ಸಿನಿಮಾದಲ್ಲಿ ನಟನೆ
ಮಂಗಳವಾರಂ, ಆರ್ಡಿಎಕ್ಸ್ ಲವ್, ರಕ್ಷಣ ಗಿನ್ನ, ವೆಂಕಿಮಾಮಾ, ಲೀಟರ್, ಕಿರಾತಕ, ಇಶ್ಕ್, ಹೆಡ್ಬುಷ್, ಅನಗನಗಾ ಅತಿಥಿ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಡಾಕು ಮಹರಾಜ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು
ತಂದೆ ನೆನದು ಅತ್ತಿದ್ದ ಪಾಯಲ್
ತಂದೆ ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ಅವರನ್ನು ಉಳಿಸಿಕೊಳ್ಳಲು ಎಷ್ಟೇ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಅದೇ ಸಮಯಲ್ಲಿ ನನ್ನ ಸಹೋದರಿ ಕಾಣೆಯಾಗಿದ್ದರು ಎಂದು ಹೆಡ್ಬುಷ್ ಸಿನಿಮಾ ರಿಲೀಸ್ ವೇಳೆ ಭಾವುಕರಾಗಿದ್ದರು. ಪಾಯಲ್ ಎಷ್ಟೇ ಬೋಲ್ಡ್ ಎನಿಸಿದರೂ ಸಹ ಕುಟುಂಬದ ವಿಚಾರದಲ್ಲಿ ಸೂಕ್ಷ್ಮ ಎನ್ನುವುದು ಅಂದೇ ಎಲ್ಲರಿಗೂ ತಿಳಿದದ್ದು.