'ವಂಡರ್​ ವುಮೆನ್​​' ಪಾರ್ವತಿ

ಮಮತಾ

'ವಂಡರ್​ ವುಮೆನ್​​' ಪಾರ್ವತಿ

ಪಾರ್ವತಿ ಮೆನನ್​ ಎಂದೇ ಹೆಚ್ಚು ಪರಿಚಿತರಾದ ಪಾರ್ವತಿ ತಿರುವೊತ್ತು ಅವರು ಕಳೆದ ಹಲವು ವರ್ಷದಿಂದ ಅವರ ಹೆಸರಿನಲ್ಲಿದ್ದ ಮೆನನ್​ ಎನ್ನುವ ಪದ ತೆಗೆದು ಹಾಕಿದ್ದರು. ಇದಕ್ಕೆ ಕಾರಣ ಏನು ಎನ್ನುವ ಬಗ್ಗೆ ಹಲವರಲ್ಲಿ ಪ್ರಶ್ನೆ ಮೂಡಿದ್ದು ಉಂಟು. ಮೆನನ್​ ಎಂಬ ಪದವು ಜಾತಿ ಸೂಚಿಸುವ ಕಾರಣ ಅದನ್ನು ತೆಗೆದು ಹಾಕಿ ಅವರ ಊರಿನ ಹೆಸರನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಸ್ಟೂಡೆಂಟ್ಸ್ ಪರ ನಿಂತ 'ಚಾರ್ಲಿ' ಹುಡ್ಗಿ

ಪಾರ್ವತಿ ಮೆನನ್​ ಅವರು ಪ್ರತಿ ಬಾರಿಯೂ ಸಮಾಜದಲ್ಲಾಗುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನ್ಯಾಯದ ಪರ ನಿಲ್ಲುತ್ತಾರೆ. ಅದರಂತೆ ನೀಟ್​​ ಪರೀಕ್ಷೆಯಲ್ಲಾದ ಲೋಪದ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಸರ್ಕಾರದ ನಡೆ ವಿರುದ್ಧ ಇನ್​ಸ್ಟಾಗ್ರಾಮ್​ನಲ್ಲಿ ಕೆಂಡಕಾರಿದ್ದರು.

ಹಮ್ ಆಪ್ಕೆ ಹೈ ಕೌನ್ ನೆನೆದ ಪೃಥ್ವಿ ಹುಡ್ಗಿ

ಪೋಷಕರೊಂದಿಗೆ ನೋಯ್ಡಾದಲ್ಲಿ ವಾಸ ಮಾಡುತ್ತಿದ್ದಾಗ ನೋಡಿದಮೊದಲ ಸಿನಿಮಾ. ಮಾಧುರಿ ಅವರ ಉಡುಗೆ, ಮೇಕಪ್​ ಶೈಲಿ, ನೃತ್ಯ ನನ್ನನ್ನು ಬೆರಗುಗೊಳಿಸಿತ್ತು. ಹಮ್ ದೋನೋ ಹೈ ಅಲಗ್ ಹಾಡು ನೋಡಿ ನೃತ್ಯವನ್ನು ಅನುಕರಿಸಿದ ಬಗ್ಗೆ ಇನ್​​ಸ್ಟಾಗ್ರಾಮ್​ನಲ್ಲಿ ಪಾರ್ವತಿ ಬರೆದುಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಅನುಭವಿಸಿದ್ದ ಪಾರ್ವತಿ

ಪಾರ್ವತಿ ಮೆನನ್​ ಅವರು ಮುಂಬೈನಲ್ಲಿ ನಡೆದ ಮಾಮಿ ಮುಂಬೈ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮೀ ಟೂ ಅಭಿಯಾನದ ಕುರಿತು ಮಾತನಾಡಿದ್ದರು. ಬಾಲ್ಯದಲ್ಲಿ ತಮಗಾದ ಲೈಂಗಿಕ ದೌರ್ಜನ್ಯ, ಅದೊಂದು ಸಮಸ್ಯೆ ಎಂದು ಅರ್ಥವಾಗಲು 17 ವರ್ಷ ಬೇಕಾಗಿತ್ತು ಎಂದು ವಿವರಿಸಿದ್ದರು

ಕನ್ನಡದ ನಾಲ್ಕು ಸಿನಿಮಾದಲ್ಲಿ ನಟನೆ

ಪುನೀತ್​ ರಾಜ್​ಕುಮಾರ್ ಅವರ ನಟನೆಯ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ಪಾರ್ವತಿ ಅವರು ನಟಿಸಿ ಸಾಕಷ್ಟು ಕನ್ನಡಿಗರನ್ನು ಫ್ಯಾನ್ಸ್​ ಆಗ ಬಡ್ತಿ ಪಡೆದುಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಅವರ ನಟನೆಯ ಮಳೆ ಬರಲಿ ಮಂಜು ಬರಲಿ ಸಿನಿಮಾದಲ್ಲಿ ನಟಿಯಾಗಿ ನಟಿಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು. ಶಿವರಾಜ್​ಕುಮಾರ್ ಅವರ ಅಂದರ್​ ಬಾಹರ್​ ಸಿನಿಮಾದಲ್ಲಿಯೂ ನಟಿಸಿದ್ದರು.

ಎಂದಿಗೂ ಕಣ್ಮನ ಸೆಳೆಯುವ ಚಾರ್ಲಿ

ಚಾರ್ಲಿ ಸಿನಿಮಾವೂ ಪಾರ್ವತಿ ಮೆನನ್ ಅವರಿಗೆ ಬೇರೆಯದೇ ಖ್ಯಾತಿಯನ್ನು ತಂದುಕೊಟ್ಟಿತ್ತು. ಬೆಂಗಳೂರು ಡೇಸ್​​, ಎನ್ನು ನಿಂತೆ ಮೊಯ್ದಿನ್, ಪೂ, ಕೂಡೆ, ತಂಗಲಾನ್​​ ಸಿನಿಮಾಗಳು ಮೆಚ್ಚುಗೆಗೆ ಪಾತ್ರವಾಗಿದೆ. ಪಾರ್ವತಿ ಅವರಿಗೆ ತಮ್ಮದೇ ಆದ ಪ್ರತ್ಯೇಕ ಫ್ಯಾನ್​ ಬೇಸ್ ಇದೆ.

ಮಹಿಳಾ ಪ್ರಾಧಾನ್ಯ ಪಾತ್ರಕ್ಕೆ ಮಾತ್ರ ಸಹಿ

ಪಾರ್ವತಿ ಅವರು ಇಲ್ಲಿಯವರೆಗೂ ತಮ್ಮ ಸಿನಿಮಾ ಆಯ್ಕೆಗೆ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅವರ ಪ್ರತೀ ಸಿನಿಮಾದಲ್ಲಿ ಮಹಿಳೆಗೆ ಇರುವ ಪ್ರಾಧಾನ್ಯವನ್ನು ಕಂಡುಕೊಂಡು, ಕತೆ ಒಪ್ಪಿ ನಂತರ ಸಿನಿಮಾಕ್ಕೆ ಸಹಿ ಮಾಡುತ್ತಾರೆ. ವಂಡರ್​ ವುಮೆನ್, ಚಾರ್ಲಿ, ಪೃಥ್ವಿ, ಮಿಲನ, ಬೆಂಗಳೂರು ಡೇಸ್​ ಎಲ್ಲದರಲ್ಲಿಯೂ ಅವರ ಪಾತ್ರ ಹೆಚ್ಚಿದೆ.