ಮಲಯಾಳಿ ಬೆಡಗಿ ಪಾರ್ವತಿ ತಿರುವೊತ್ತು ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಡ್ಡೆ ಹುಡುಗರ ಮೈ ಬಿಸಿಯೇರಿಸಿದೆ.
ಕೊಲೆ ಬೆದರಿಕೆ
ಪಾರ್ವತಿ ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರರಂಗದಲ್ಲಿ ಮಹಿಳೆಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ತಮಗೆ ಬಂದ ಅತ್ಯಂತ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಚಕ್ರವ್ಯೂಹದಂತೆ ರಕ್ಷಣೆ
ತಮಗೆ ಎದುರಾದ ಇಂತಹ ಸೈಬರ್ ದಾಳಿ ಹಾಗೂ ಬೆದರಿಕೆಗಳ ಸಮಯದಲ್ಲೂ ತಮ್ಮ ಕುಟುಂಬ ಮತ್ತು ಆಪ್ತ ಗೆಳೆಯರ ಬಳಗ ತಮಗೆ ಒಂದು 'ಚಕ್ರವ್ಯೂಹ'ದಂತೆ ರಕ್ಷಣೆಯಾಗಿ ನಿಂತಿದ್ದನ್ನು ಪಾರ್ವತಿ ಸ್ಮರಿಸಿದ್ದಾರೆ.
ಸಿನಿಮಾಗಳಿಂದ ಕೈಬಿಟ್ಟರು
ಪ್ರಮುಖ ವಿಷಯಗಳ ಪರವಾಗಿ ದಿಟ್ಟ ರಾಜಕೀಯ ನಿಲುವುಗಳನ್ನು ತಳೆದ ಕಾರಣಕ್ಕಾಗಿ, ಚಿತ್ರರಂಗದ ಕೆಲವು ಪ್ರಭಾವಿಗಳು ದೊಡ್ಡ ಬಜೆಟ್ ಸಿನಿಮಾಗಳಿಂದ ನನ್ನನ್ನು ಕೈಬಿಟ್ಟರು ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಮುಂಬರುವ ಹೊಸ ಸಿನಿಮಾ
ಪಾರ್ವತಿ ಅವರು ನಟ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಮತ್ತೊಮ್ಮೆ ಜೋಡಿಯಾಗುತ್ತಿದ್ದಾರೆ. ನಿಸಾಮ್ ಬಷೀರ್ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ 'ಐ ನೋಬಡಿ' ಎಂದು ಹೆಸರಿಡಲಾಗಿದೆ.
ಕನ್ನಡ ಚಿತ್ರರಂಗದ ನಂಟು
ಪಾರ್ವತಿ ಅವರು ಕನ್ನಡ ಸಿನಿಮಾ ಪ್ರೇಕ್ಷಕರಿಗೂ ಅತ್ಯಂತ ಆಪ್ತರಾಗಿದ್ದಾರೆ. ಅಪ್ಪು ಅಭಿನಯದ ಸೂಪರ್ ಹಿಟ್ ಮಿಲನ ಹಾಗೂ ಪೃಥ್ವಿ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಅವರು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ತಿರುವೊತ್ತು ಹೆಸರಿನ ಹಿಂದಿನ ನಿರ್ಧಾರ
ಪಾರ್ವತಿ ಮೆನನ್ ಎಂದಿದ್ದ ಹೆಸರನ್ನು ಯಾವುದೇ ರೀತಿಯ ಜಾತಿ ಸೂಚಕ ಉಪನಾಮ ಇರಬಾರದು ಎಂಬ ಕಾರಣಕ್ಕೆ ತಾಯ್ನಾಡಿನ ಮೂಲ ಹೆಸರಾದ 'ಪಾರ್ವತಿ ತಿರುವೊತ್ತು' ಎಂಬ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಹೋರಾಟ
ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ ಮತ್ತು ಲಿಂಗ ಸಮಾನತೆ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪನೆಯಾದ 'ವುಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಂಘಟನೆಯ ಸದಸ್ಯರಲ್ಲಿ ಪಾರ್ವತಿ ಕೂಡ ಒಬ್ಬರಾಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ
ಕೇವಲ ಗ್ಲಾಮರ್‌ಗೆ ಸೀಮಿತವಾಗದ ಪಾರ್ವತಿ, ಅತ್ಯಂತ ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವಲ್ಲಿ ಹೆಸರುವಾಸಿಯಾಗಿದ್ದಾರೆ. ಇವರ 'ಟೇಕ್ ಆಫ್' ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿಯ ಗೌರವ ಕೂಡ ಲಭಿಸಿದೆ.
ಹೊಸ ಅವತಾರ
ಸದ್ಯ ಪಾರ್ವತಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ, ಅದರ ಮೇಲೊಂದು ಕಪ್ಪು-ಬಿಳಿ ಪಟ್ಟೆಗಳ ಬ್ಲೇಜರ್ ಹಾಕಿಕೊಂಡು ಅತ್ಯಂತ ವಿಶಿಷ್ಟ ಹಾಗೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಹಾಟ್ನೆಸ್ಗೆ ಫ್ಯಾನ್ಸ್ ಫಿದಾ
ಫೋಟೋಗಳಲ್ಲಿ ಪಾರ್ವತಿ ಅವರು ಮಾದಕತೆ ಫಿದಾ ಆಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್ಗಳ ಮೂಲಕ ಪಾರ್ವತಿ ಅವರ ಮೈಮಾಟನ್ನು ಹೊಗಳುತ್ತಿದ್ದಾರೆ.