'ಪೃಥ್ವಿ' ಹುಡ್ಗಿ ನೋಡಿ...

ಮಮತಾ

'ಪೃಥ್ವಿ' ಹುಡ್ಗಿ ನೋಡಿ...

ಕನ್ನಡದ ಮಿಲನ, ಪೃಥ್ವಿ ಸಿನಿಮಾದಿಂದ ಸ್ಯಾಂಡಲ್​ವುಡ್​ನಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಪಾರ್ವತಿ ಮೆನನ್ ಸದ್ಯ ಸಿನಿಮಾಗಳಲ್ಲಿ ನಟಿಸೋದನ್ನು ಕಡಿಮೆ ಮಾಡಿದ್ದಾರೆ. ಆದರೆ, ಇದರ ಹಿಂದೆ ಬೇರೆಯವರ ಕೈವಾಡವೇ ಹೆಚ್ಚಿದೆ ಎಂದು ಇತ್ತೀಚೆಗೆ ಅವರೇ ಹೇಳಿಕೊಂಡಿದ್ದರು.

I, Nobody

I, Nobody. ಸಿನಿಮಾ ಮೂಲಕ ಪೃಥ್ವಿರಾಜ್​ ಸುಕುಮಾರನ್​ ಮತ್ತು ಮಲಯಾಳಂ ನಟಿ ಪಾರ್ವತಿ ಒಟ್ಟಾಗಿ ನಟಿಸುತ್ತಿದ್ದಾರೆ. ಎನ್ನು ನಿನ್ನೇ ಮೊಯ್ದೀನ್, ಕೂಡೇ ಮೂಲಕ ಈ ಜೋಡಿ ಸಾಕಷ್ಟು ಮನೆ ಮಾತಾಗಿದ್ದರು. ಸದ್ಯ ಒಟ್ಟಾಗಿ ನಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪಾರ್ವತಿ ಹೊಸ ಸಿನಿಮಾ

ನಿಸಂ ಬಶೀರ್​ ನಿರ್ದೇಶನದ I, Nobody ಸಿನಿಮಾ ಜುಲೈ 9ಕ್ಕೆ ರಿಲೀಸ್​ ಆಗಲಿದೆ. ಪಾರ್ವತಿ ತಿರುವತ್ತೂರು ಒಬ್ಬ ಅದ್ಭುತ ಹಾಗೂ ಬುದ್ಧಿವಂತ ನಟಿ. ಸ್ಕ್ರಿಪ್ಟ್​​ನಲ್ಲಿ ಏನಿದೆಯೋ ಅಷ್ಟಕ್ಕೆ ಮಾತ್ರ ಅವರು ಸೀಮಿತವಾಗೋದಿಲ್ಲ ಎಂದು ಪೃಥ್ವಿ ಸುಕುಮಾರನ್​ ಹೊಗಳಿದ್ದರು.

ನನ್ನ ನಿರ್ಮೂಲನೆಗೆ ಪಣ ತೊಟ್ಟಿದ್ರು

ಚಿತ್ರರಂಗದಲ್ಲಿ ಕೆಲವರು ಒಟ್ಟಾಗಿ ಸಿನಿಮಾ ರಂಗದಿಂದ ನನ್ನನ್ನು ದೂರವಿಡಲು ಯತ್ನಿಸಿದ್ದರು. ನನಗೆ ಕೊಲೆ ಹಾಗೂ ಬೆದರಿಕೆ ಕರೆಗಳು ಬಂದಿದ್ದವು ಎಂದು ಪಾರ್ವತಿ ಇತ್ತೀಚೆಗೆ ಆರೋಪ ಮಾತನಾಡಿದ್ದಾರೆ

ನನಗೆ ನನ್ನ ಪೋಷಕರು, ಸಹೋದರ ಪ್ರಪಂಚ

ನನಗೆ ತುಂಬಾ ಪ್ರೀತಿ ಮತ್ತು ತಿಳುವಳಿಕೆ ಇರುವ ತಾಯಿ ಮತ್ತು ತಂದೆ ಇದ್ದಾರೆ. ನನಗೆ ಒಬ್ಬ ಸಹೋದರನಿದ್ದಾನೆ, ಅವರೊಂದಿಗೆ ನಾನು ಅದ್ಭುತ ಸಂಭಾಷಣೆ ನಡೆಸುತ್ತೇನೆ; ಅವನು ನನ್ನ ಆತ್ಮೀಯ ಸ್ನೇಹಿತನಂತೆ. ನನಗೆ ಕಿರುಕುಳ, ದಾಳಿ ಮತ್ತು ನನ್ನ ವಿರುದ್ಧ ಕೊಲೆ ಬೆದರಿಕೆಗಳು ಮತ್ತು ಅತ್ಯಾಚಾರ ಬೆದರಿಕೆಗಳು ಬಂದಾಗ ಕಾಪಾಡಲು ರಕ್ಷಣಾ ಕವಚವೇ ಇದೆ ಎಂದು ಪಾರ್ವತಿ ಹೇಳಿಕೊಂಡಿದ್ದರು

ಯಾವುದಕ್ಕೂ ಧೃತಿಗೆಡಲಿಲ್ಲ

ಇಷ್ಟೆಲ್ಲ ಸಮಸ್ಯೆ ಎದುರಾದರು ನಾನು ಕ್ಯಾರೆ ಎನ್ನದೆ ಸ್ಥಿರವಾಗಿರಲು ಕಾರಣವಾಗಿದ್ದು ನನ್ನಲ್ಲಿರುವ ಆತ್ಮಸ್ಥೈರ್ಯ. ಸತ್ಯದ ಪರ ನಿಲ್ಲುವ ಧೈರ್ಯ, ಚಿತ್ರರಂಗದಲ್ಲಿ ಬದಲಾವಣೆ ತರಬೇಕೆನ್ನುವ ಛಲ ಎಂದು ಅವರು ಹೇಳಿಕೊಂಡಿದ್ದಾರೆ

ಚಾರ್ಲಿ ಇಂದಿಗೂ ಹಿಟ್ ಸಿನಿಮಾ

ಚಾರ್ಲಿ ಸಿನಿಮಾದಿಂದ ಪಾರ್ವತಿ ಅವರು ಹೆಚ್ಚಾಗಿ ಇಷ್ಟವಾಗುತ್ತಾರೆ. ಅವರ ಪ್ರತಿಯೊಂದು ಸಿನಿಮಾದಲ್ಲಿ ಅವರ ಪಾತ್ರ ವಿಭಿನ್ನ. ಬೆಂಗಳೂರು ಡೇಸ್, ತಂಗಲಾನ್​, ಮರಿಯನ್, ವಂಡರ್​ ವುಮೆನ್, ಮೈ ಸ್ಟೋರಿ ಸಿನಿಮಾ ಸೇರಿದಂತೆ ಕಾಲಿವುಡ್​, ಮಾಲಿವುಡ್, ಸ್ಯಾಂಡಲ್​ವುಡ್​ನಲ್ಲಿ ನಟಿಸಿದ್ದಾರೆ.