ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ. ದಿವಂಗತ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ದೌರ್ಜನ್ಯದ ವಿರುದ್ಧ ಧ್ವನಿ
ಕೇವಲ ನಟನೆ ಮಾತ್ರವಲ್ಲದೆ, ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಪಾರ್ವತಿ ಅವರು ಸದಾ ಧ್ವನಿ ಎತ್ತುತ್ತಾರೆ. ಹೀಗಾಗಿ, ಪಾರ್ವತಿ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.
ನ್ಯೂ ಲುಕ್ ವೈರಲ್
ತಾಜಾ ಸಂಗತಿ ಏನೆಂದರೆ, ಪ್ರಸ್ತುತ ಪಾರ್ವತಿ ಅವರು ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಬೋಲ್ಡ್ ಪೋಸ್
ಬಹಳ ವಿಚಿತ್ರವಾಗಿ ಮೇಕಪ್ ಮಾಡಿಕೊಂಡು ಅರೆಬರೆ ಬಟ್ಟೆ ಧರಿಸಿ, ಕ್ಯಾಮೆರಾಗೆ ಮಾದಕವಾಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಗಳಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಪಾರ್ವತಿ ಅಚ್ಚರಿ ಮೂಡಿಸಿದ್ದಾರೆ.
ಹ್ಯಾಲೋವೀನ್ ಆಚರಣೆ
ಫೋಟೋ ಕುರಿತು "ಮತ್ತು ಅಲ್ಲಿ... ಅವಳು ಉದಯಿಸುತ್ತಾಳೆ" ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ತುಂಬಾ ಕೊಳಕು ಹ್ಯಾಲೋವೀನ್ಗಾಗಿ ಇದನ್ನು ಮಾಡಿದ್ದಕ್ಕಾಗಿ ದಿ ಡರ್ಟಿ ಮ್ಯಾಗಜಿನ್ಗೆ ಧನ್ಯವಾದಗಳು ಎಂದಿದ್ದಾರೆ.
ಗುರುತಿಸುವುದು ಕಷ್ಟ
ಇನ್ನು ಪಾರ್ವತಿ ಅವರ ಫೋಟೋ ನೋಡಿದವರು ಮೊದಲ ನೋಟದಲ್ಲಿ ಪಾರ್ವತಿ ಎಂದು ಗುರುತಿಸುವುದು ತುಂಬಾ ಕಷ್ಟ. ಏಕೆಂದರೆ, ಪಾರ್ವತಿ ಅವರು ಕಂಪ್ಲೀಟ್ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ ಎನ್ನುತ್ತಿದ್ದಾರೆ.
ಇವರೇನಾ ಪಾರು?
ಫೋಟೋ ನೋಡಿದವರು ಸೂಪರ್, ಎಂಥಾ ನೋಟ, ಇದು ಹ್ಯಾಲೋವೀನ್ ವೇಷಭೂಷಣವೇ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ನಮ್ಮ ಅಪ್ಪು ಜತೆ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸಿದವರು ಇವರೇನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.