ಹಾಟ್​ ಅವತಾರದಲ್ಲಿ ಪಾರು

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಟ್​ ಅವತಾರದಲ್ಲಿ ಪಾರು

ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತುರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ. ದಿವಂಗತ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ.

ತಮ್ಮ ಪಾತ್ರಗಳಿಗೆ ಹೆಚ್ಚು ಆದ್ಯತೆ

ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪಾರ್ವತಿ ನಟಿಸಿದ್ದು, ತಮ್ಮ ನಟನೆಯಿಂದಲೇ ಒಳ್ಳೆಯ ಹೆಸರು ಮಾಡಿದ್ದಾರೆ. ತಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ.

ದೌರ್ಜನ್ಯದ ವಿರುದ್ಧ ಧ್ವನಿ

ಕೇವಲ ನಟನೆ ಮಾತ್ರವಲ್ಲದೆ, ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಪಾರ್ವತಿ ಅವರು ಸದಾ ಧ್ವನಿ ಎತ್ತುತ್ತಾರೆ. ಹೀಗಾಗಿ, ಪಾರ್ವತಿ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.

ಹೊಸ ಲುಕ್​ ಚರ್ಚೆ

ಕಳೆದ ಕೆಲವು ದಿನಗಳಿಂದ ಪಾರ್ವತಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿಭಿನ್ನ ಸ್ಟೈಲಿಶ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾರ್ವತಿಯ ಹೊಸ ಲುಕ್ ಪ್ರೇಕ್ಷಕರಲ್ಲಿ ಇದೀಗ ಚರ್ಚೆಯ ವಿಷಯವಾಗಿದೆ.

ವೆರೈಟಿಯಲ್ಲಿ ಮಾದಕತೆ

ವೆರೈಟಿ ನಿಯತಕಾಲಿಕೆಯ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಪಾರ್ವತಿ ಅವರು ಬಾಲಿವುಡ್ ತಾರೆಯರೊಂದಿಗೆ ಮಿಂಚಿದರು. ಅವರು ಧರಿಸಿದ್ದ ಹಾಟ್​ ಉಡುಪು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬಾಡಿ ಶೇಮಿಂಗ್

ಪಾರ್ವತಿ ಅವರು ಕಪ್ಪು ಬಣ್ಣದ ಲಾಂಗ್​ ಗೌನ್​ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಟ್​ ಲುಕ್​ನೊಂದಿಗೆ ಎಲ್ಲರ ಗಮನ ಸೆಳೆದರು. ಅಲ್ಲದೆ, ಪಾರ್ವತಿ ತುಂಬಾ ದಪ್ಪ ಆಗಿದ್ದಾರೆ ಎಂಬ ಕಾಮೆಂಟ್​ ಬಂದಿದ್ದು, ಬಾಡಿ ಶೇಮಿಂಗ್​ಗೆ ಗುರಿಯಾಗಿದ್ದಾರೆ.​