ಸರ್ವಂ ಮಾಯಂ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದ ರಿಯಾ ಶಿಬು ಸದ್ಯ ಚಿಯಾನ್ ವಿಕ್ರಂರ ಚಿಯಾನ್ 63 ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇವರೊಂದಿಗೆ ಸಂಯುಕ್ತಾ ಹೆಗ್ಡೆ, ಊರ್ವಶಿ ಸಹ ಇರಲಿದ್ದು, ಇದೊಂದು ಆಕ್ಷನ್ ಕ್ರೈಂ ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ.
ಮಾಲಿವುಡ್, ಕಾಲಿವುಡ್ನಲ್ಲಿ ರಿಯಾ ಹವಾ
21ರ ಪೋರಿ ಈ ರಿಯಾ ಶಿಬು.. ಕಾಲಿವುಡ್ ಮತ್ತು ಮಾಲಿವುಡ್ನಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಅನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ. ಕೆಲಸದ ಬ್ಯುಸಿ ಹಾಗೂ ಕಾಲೇಜಿನ ಓದಿನ ಮಧ್ಯೆ ಓಣಂಗಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ,
ಓಣಂ ಸೀರೆಯಲ್ಲಿ ಮಿಂಚಿದ ರಿಯಾ
ಸಾಮಾನ್ಯವಾಗಿ ಓಣಂಗಾಗಿ ತೊಡುವ ಬಿಳಿ ಸೀರೆ ಹಾಗೂ ಅದಕ್ಕೆ ಒಪ್ಪಿಗೆಯಾಗುವ ಮರೂನ್ ರವಿಕೆ..ಹರಿಬಿಟ್ಟ ಕೂದಲು..ಸಿಂಪಲ್ ಮೇಕಪ್ ಅವರ ಅಂದವನ್ನು ಹೆಚ್ಚಿಸಿದೆ.
ಓಣಂ ಬಗ್ಗೆ ರಿಯಾ ಹೇಳಿದ್ದೇನು
ಓಣಂ ಎಂದರೆ ಮುಖ್ಯವಾಗಿ ನಾವು ಯಾರೊಂದಿಗೆ ಸಮಯ ಕಳೆಯುತ್ತೇವೆ ಮತ್ತು ಒಟ್ಟಾಗಿರುವ ಭಾವನೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹಂಚಿಕೊಳ್ಳುವ ಆರಾಮದಾಯಕ ವಾತಾವರಣವೇ ಹಬ್ಬವನ್ನು ವಿಶೇಷವಾಗಿಸುತ್ತದೆ ಎಂದು ರಿಯಾ ಶಿಬು ಹೇಳಿಕೊಂಡಿದ್ದಾರೆ.
ಬಾಲ್ಯದ ಓಣಂ ನೆನಪು
ಬಾಲ್ಯದ ಓಣಂ ದಿನಗಳನ್ನು ನೆನೆಪಿಸಿಕೊಂಡ ರಿಯಾ, ಶಾಲೆಯಲ್ಲಿ ಅಥಪೂಕಳಂ ಹಾಗೂ ವಡಂವಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಎಂದು ರಿಯಾ ಹೇಳಿದ್ದಾರೆ. ಆದರೆ ವಡಂವಲಿಯಲ್ಲಿ ಸೋತು ಹೋಗುತ್ತಾರೆಂಬ ಕಾರಣಕ್ಕೆ ಯಾರೂ ತಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ತಮಾಷೆಯಾಗಿ ನುಡಿದಿದ್ದಾರೆ. ಪೂಕಳದಲ್ಲಿ ಎರಡು ಹೂವುಗಳನ್ನು ಇಟ್ಟು ಓಡಿಹೋಗುವುದು, ಪಾಯಸದ ಗಮ್ಮತ್ತಿನಲ್ಲಿ ಸುತ್ತಾಡುವುದು ಬಾಲ್ಯದ ಮಧುರ ನೆನಪು ಎಂದಿದ್ದಾರೆ.
ಕೇರಳಕ್ಕೆ ಹೋಗಿಲ್ಲ
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ಶೂಟಿಂಗ್‌ಗಳು ಇರುವುದರಿಂದ ಈ ಬಾರಿ ಕೇರಳಕ್ಕೆ ತೆರಳಲು ಸಾಧ್ಯವಾಗಿಲ್ಲ, ಹೀಗಾಗಿ ಚೆನ್ನೈನಲ್ಲೇ ತನ್ನ 'ಶೂಟಿಂಗ್ ಕುಟುಂಬ'ದೊಂದಿಗೆ ಓಣಂ ಆಚರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಕೀರ್ತಿ ತಂದುಕೊಟ್ಟ ಸರ್ವಂ ಮಾಯಂ
ರಿಯಾ ಶಿಬು ಹಾಗೂ ನಿವಿನ್ ಪೌಲಿ ನಟನೆಯ ಸರ್ವಂ ಮಾಯ ಸಾಕಷ್ಟು ಹಿಟ್ ಕಂಡಿತ್ತು. ಸಖಿಲ್ ಸತ್ಯನ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ನಲ್ಲಿ ತೆರೆಕಂಡಿತ್ತು. ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಸಾಂಪ್ರದಾಯಿಕ ವೃತ್ತಿ ಪೂಜಾರಿ ಕೆಲಸಕ್ಕೆ ಇಳಿಯುವ ನಾಸ್ತಿಕ ಪ್ರಭೇಂದು, ದೆಲುಲು ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳೋದು ಹೇಗೆ. ಈಕೆ ಯಾರು ಎನ್ನುವುದರ ಸುತ್ತ ಕತೆಯನ್ನು ಹೆಣೆಯಲಾಗಿದೆ.
ರಿಯಾ ನಟನೆಯ ಸಿನಿಮಾ ಇದು
21 ವರ್ಷದ ರಿಯಾ ಶಿಬು ಮುಂಬೈಕರ್, ಮುರಾ, ಕಪ್, ವೀರ-ಧೀರ ಶೂರ ಪಾರ್ಟ್2, ಥಗ್ಸ್, ಸರ್ವಂ ಮಾಯಂ ಹಾಗೂ ಅಥಿರಡಿ ಸಿನಿಮಾದಲ್ಲಿ ನಟಿಸಿದ್ದಾರೆ.