ಇಂದು ವೈಕುಂಠ ಏಕಾದಶಿ ಹಿನ್ನೆಲೆ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಾವಿರಾರು ಭಕ್ತಾಧಿಗಳು.ಈ ದಿನದಂದು ವೈಕುಂಠ ದ್ವಾರ ತೆರೆಯಲಾಗಿದ್ದು, ದೇಶದ ಹಲವೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು.ಇಡೀ ದೇಗುಲ ಪುಷ್ಪಗಳಿಂದ ಅಲಂಕಾರಗೊಂಡಿದ್ದು, ಬಣ್ಣದ ಲೈಟಿಂಗ್ಸ್ನಿಂದ ಕಂಗೊಳಿಸಿದೆ. ಇದು ನೋಡುಗರ ಕಣ್ಮನ ಸೆಳೆದಿದೆ.ಇಂದಿನಿಂದ ಜ.8 ರವರೆಗೆ ವೈಕುಂಠ ದ್ವಾರ ತೆರೆದಿರಲಿದೆ ಎಂದು ತಿರುಪತಿ ತಿರುಮಲ ದೇವಾಸ್ಥಾನದ ಟ್ರಸ್ಟ್ ಮಾಹಿತಿ ನೀಡಿದೆ.ಆನ್ಲೈನ್ನಲ್ಲಿ ಟಿಕೆಟ್ ಪಡೆದವರಿಗೆ ಮಾತ್ರ ಡಿ.30,31 ಮತ್ತು ಜ.01ರಂದು ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ವಿಶೇಷವಾಗಿ, ಈ ಮೂರು ದಿನಗಳಂದು ಆನ್ಲೈನ್ ಟಿಕೆಟ್ ಪಡೆಯದವರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಟಿಟಿಡಿ ತಿಳಿಸಿದೆ