ದಕ್ಷಿಣ ಭಾರತದ ಸಿನಿರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ನಟಿ ನುವೇಕ್ಷಾ, ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಸಿನಿರಸಿಕರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಹಾಟ್ ಫೋಟೋಗಳು ವೈರಲ್ ಆಗಿವೆ.
ಹುಟ್ಟು ಮತ್ತು ಹಿನ್ನೆಲೆ
ಅಂದಹಾಗೆ, ನುವೇಕ್ಷಾ ಅವರು 1999. ಆಗಸ್ಟ್ 1ರಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದರು. ಅವರ ನಿಜ ಹೆಸರು ನಮ್ರತಾ ದರೇಕರ್ ಎಂದು ತಿಳಿದು ಬಂದಿದೆ.
ಮಾಡೆಲಿಂಗ್ನಿಂದ ಬಣ್ಣದ ಲೋಕಕ್ಕೆ
ಮಾಡೆಲಿಂಗ್ ಲೋಕದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು, 2021ರ 'ಇಪ್ಪುಡು ಕಾಕ ಇಂಕೆಪ್ಪುಡು' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಪ್ರಬುದ್ಧ ಅಭಿನಯ ತೋರಿದರು.
ಪ್ರಮುಖ ಚಿತ್ರಗಳು
ನುವೇಕ್ಷಾ ಅವರು ಹಿಟ್: ದಿ ಫಸ್ಟ್ ಕೇಸ್ (2022), ಸೆಬಾಸ್ಟಿಯನ್ ಪಿಸಿ 524 (2022) ಮತ್ತು ರೋಟಿ ಕಪಡ ರೊಮ್ಯಾನ್ಸ್ (2024) ನಂತಹ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ತೆಲುಗು ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ವೃತ್ತಿಜೀವನ ವಿಸ್ತರಣೆ
ರೋಟಿ ಕಪ್ಡಾ ರೊಮ್ಯಾನ್ಸ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನುವೇಕ್ಷಾ, ಇದೀಗ ತಮ್ಮ ವೃತ್ತಿಜೀವನವನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದ್ದಾರೆ. ತೆಲುಗು ಮಾತ್ರವಲ್ಲದೆ, ಕನ್ನಡ ಮತ್ತು ತಮಿಳು ಚಿತ್ರರಂಗದಿಂದಲೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಜಾಲತಾಣದಲ್ಲಿ ಆ್ಯಕ್ಟೀವ್
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನುವೇಕ್ಷಾ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಗೋಲ್ಡ್ ಬಕಲ್ ಇರುವ ಕ್ರಿಮ್ ವೈಟ್ ಕಟೌಟ್ ಡ್ರೆಸ್ನಲ್ಲಿ ತುಂಬಾ ಮಾದಕ ಭಂಗಿಯಲ್ಲಿ ಪೋಸ್ ನೀಡಿದ್ದಾರೆ.
ಮೈಮಾಟಕ್ಕೆ ಫ್ಯಾನ್ಸ್ ಫಿದಾ
ತುಂಬಾ ಬೋಲ್ಡ್ ಡ್ರೆಸ್ನಲ್ಲಿ ನುವೇಕ್ಷಾ ಅವರ ಮೈಮಾಟವನ್ನು ನೋಡಿದ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದು, ಸೌಂದರ್ಯದ ಗಣಿ ಎಂದು ಹೊಗಳುತ್ತಿದ್ದಾರೆ.