ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಭಕ್ಷ್ಯ!
ಭಾನುಪ್ರಿಯ ಡಿ.ಕೆ
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಭಕ್ಷ್ಯ!
ಬೆಂಕಿ ಅಥವಾ ಗ್ಯಾಸ್ ಬಳಸದೆ ಕೇವಲ 5-10 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ಪೌಷ್ಟಿಕ ಮತ್ತು ರುಚಿಕರವಾದ ಅಡುಗೆಗಳ ರೆಸಿಪಿ ಇಲ್ಲಿವೆ.
ಚುರುಮುರಿ
ಇದು ಅತ್ಯಂತ ಜನಪ್ರಿಯ ತಿಂಡಿಯಾಗಿದೆ. ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಮನೆಯಲ್ಲಿರುವ ತರಕಾರಿ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿರಿ.
ಸಿಹಿ ಅವಲಕ್ಕಿ
ಗಟ್ಟಿ ಅವಲಕ್ಕಿ ತೊಳೆದು, ಬೆಲ್ಲದ ಪುಡಿ, ತುರಿದ ತೆಂಗಿನಕಾಯಿ, ಏಲಕ್ಕಿ ಪುಡಿ ಮತ್ತು ಬಾಳೆಹಣ್ಣಿನ ಚೂರುಗಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮೊಳಕೆ ಕಾಳುಗಳ ಸಲಾಡ್
ಮೊಳಕೆ ಬಂದ ಹೆಸರುಕಾಳು, ಸೌತೆಕಾಯಿ ಚೂರುಗಳು, ದಾಳಿಂಬೆ ಕಾಳುಗಳು, ಹಸಿಮೆಣಸಿನಕಾಯಿ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ ಸೇವಿಸಿರಿ.
ಫ್ರೂಟ್ ಸ್ಯಾಂಡ್‌ವಿಚ್
ಬ್ರೆಡ್‌ನ ಅಂಚುಗಳನ್ನು ಕತ್ತರಿಸಿ, ಅದಕ್ಕೆ ಬೆಣ್ಣೆ ಅಥವಾ ಜಾಮ್ ಹಚ್ಚಿ. ಅದರ ಮೇಲೆ ಕತ್ತರಿಸಿದ ಹಣ್ಣುಗಳನ್ನು ಜೋಡಿಸಿ ಮತ್ತೊಂದು ಬ್ರೆಡ್‌ನಿಂದ ಮುಚ್ಚಿ. ಇದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ ಸೇವಿಸಿರಿ.
ಇನ್‌ಸ್ಟಂಟ್ ಮಿಲ್ಕ್ ಪೇಡಾ
ಹಾಲಿನ ಪುಡಿಗೆ ಸ್ವಲ್ಪ ಸಕ್ಕರೆ ಪುಡಿ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ಸಣ್ಣ ಉಂಡೆಗಳನ್ನು ಮಾಡಿ ಕೈಯಲ್ಲಿ ಒತ್ತಿ ಪೇಡಾ ಆಕಾರ ನೀಡಿ. ಮೇಲೆ ಬಾದಾಮಿ ಅಥವಾ ಪಿಸ್ತಾ ಇಟ್ಟು ಅಲಂಕರಿಸಿ.