ಸ್ವಿಮ್​ಸೂಟ್​ನಲ್ಲಿ ನಿವೇದಿತಾ

ರಮೇಶ್​ ಕುಮಾರ್​​ ಬಿ ಎಡಮೋಳೆ

ಸ್ವಿಮ್​ಸೂಟ್​ನಲ್ಲಿ ನಿವೇದಿತಾ

ಮಾಜಿ ಬಿಗ್​ಬಾಸ್​ ಸ್ಪರ್ಧಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಥ್ರೋಬ್ಯಾಕ್​ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ನಿವೇದಿತಾ ಅವರು ಸ್ವಿಮ್​ಸೂಟ್​ನಲ್ಲಿ ಹಾಟ್ ಅವತಾರದಲ್ಲಿದ್ದಾರೆ.

ಡಿವೋರ್ಸ್​

ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ 2024ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಸಿನಿಮಾ ಪ್ರವೇಶ

ಸೃಜನ್ ಲೋಕೇಶ್ ನಿರ್ದೇಶನದ 'GST' (Ghosts in Trouble) ಚಿತ್ರದ ಮೂಲಕ ನಿವೇದಿತಾ ಗೌಡ ಅವರು ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರವು 2025ರಲ್ಲಿ ಬಿಡುಗಡೆಯಾಯಿತು. ಆದರೆ, ಹೇಳಿಕೊಳ್ಳುವಷ್ಟು ಹಿಟ್​ ಆಗಲಿಲ್ಲ.

ಸೋಲೋ ಟ್ರಿಪ್ ಮತ್ತು ಪ್ರವಾಸ

ವಿಚ್ಛೇದನದ ನಂತರ ಮೊದಲ ಬಾರಿಗೆ ಇಂಡೋನೇಷ್ಯಾದ ಬಾಲಿಗೆ 'ಸೋಲೋ ಟ್ರಿಪ್' ಕೈಗೊಂಡು ಸುದ್ದಿಯಾಗಿದ್ದರು. ಈ ಪ್ರವಾಸದ ಫೋಟೋ ಮತ್ತು ವಿಡಿಯೋಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಟ್ರೋಲ್‌ಗಳಿಗೆ ಖಡಕ್ ಉತ್ತರ

ವಿಚ್ಛೇದನದ ನಂತರ ಜಾಲತಾಣಗಳಲ್ಲಿ ಎದುರಾದ ನೆಗೆಟಿವ್ ಟ್ರೋಲ್‌ಗಳ ಬಗ್ಗೆ ಇತ್ತೀಚಿನ ಸಂದರ್ಶನಗಳಲ್ಲಿ ಮೌನ ಮುರಿದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ನಿರ್ಧಾರಗಳ ಬಗ್ಗೆ ಟೀಕಿಸುವವರಿಗೆ ಅವರು ನೇರವಾಗಿಯೇ ಉತ್ತರಿಸಿದ್ದಾರೆ.

ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು

ನಿವೇದಿತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಸಕ್ರಿಯರಾಗಿದ್ದು, ವಿವಿಧ ಸೌಂದರ್ಯವರ್ಧಕ ಮತ್ತು ಜೀವನಶೈಲಿ ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಮರುಮದುವೆಯ

ಇತ್ತೀಚಿನ ಒಂದು ಸಂದರ್ಶನದಲ್ಲಿ ಮರುಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಸದ್ಯಕ್ಕೆ ಅಂತಹ ಯಾವುದೇ ಯೋಚನೆ ಇಲ್ಲ ಮತ್ತು ಈಗ ಮದುವೆಯ ಬಗ್ಗೆ ಭಯವಾಗುತ್ತಿದೆ ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹಾಟ್​ ಫೋಟೋಸ್​

ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ನಿವೇದಿತಾ ಇತ್ತೀಚೆಗೆ ಥ್ರೋಬ್ಯಾಕ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಥ್ಯಾಲೆಂಡ್​ನ ಕೋಹ್​ ಲಾಂಟಾ ದ್ವೀಪಕ್ಕೆ ಭೇಟಿದಾಗ ತೆಗೆದ ಹಾಟ್​ ಫೋಟೋಗಳನ್ನು ಮತ್ತೆ ಪೋಸ್ಟ್​ ಮಾಡಿದ್ದಾರೆ.

ಸ್ವಿಮ್​ಸೂಟ್​ ಲುಕ್​

ನಿವೇದಿತಾ ಅವರು ಕೆಂಪು ಬಣ್ಣದ ಸ್ವಿಮ್​ಸೂಟ್​​ ಧರಿಸಿ, ಅದರ ಮೇಲೆ ಪಾರದರ್ಶಕ ಗೌನ್​ ಧರಿಸಿ, ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ನಿವೇದಿತಾ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.​