ಮೈಸೂರಿನ ದಂತದ ಗೊಂಬೆ ನಿವಿ

ಮಮತಾ

ಮೈಸೂರಿನ ದಂತದ ಗೊಂಬೆ ನಿವಿ

ಬಿಗ್​​ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಅವರು ಅವರ ಕ್ಯೂಟ್​ ಟಾಕ್​ ಹಾಗೂ ನೀಳವಾದ ಕೇಶರಾಶಿಯಿಂದಲೇ ಭಾರಿ ಫೇಮಸ್ಸು. ಇತ್ತೀಚೆಗೆ ಅವರು ಕ್ಲಾಸಿಕ್​ ಲುಕ್​ನಲ್ಲಿ ಲಂಗ ಹಾಗೂ ರವಿಕೆ ಧರಿಸಿ ಹಂಚಿಕೊಂಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಗೊಂಬೆ..ಗೊಂಬೆ

ಕೇಸರಿ ಬಣ್ಣದ ರವಿಕೆ, ಹಸಿರು ರಂಗ ಹರಿಬಿಟ್ಟ ಕೇಶರಾಶಿ, ಹಳೆಯ ಕಾಲದ ಕಾಸಿನ ಸರವು ಹಿಂದೆಯಿದ್ದ ಸಾಂಪ್ರದಾಯಿಕ ಉಡುಗೆಯನ್ನು ತೋರ್ಪಡಿಸಿದೆ. ಗೊಂಬೆ ಎಂದೇ ಖ್ಯಾತಿಯಾದ ನಿವೇದಿತಾ ಅವರ ಈ ಪೋಸ್ಟ್​ಗೆ ಸಾಕಷ್ಟು ಕಾಮೆಂಟ್​ಗಳು ವ್ಯಕ್ತವಾಗಿದೆ.

ಮೈಸೂರಿನ ನಿವೇದಿತಾ

ನಿವೇದಿತಾ ಗೌಡ ಅವರು ಬಿಗ್​ಬಾಸ್​ ರಿಯಾಲಿಟಿ ಶೋ ಮೂಲಕ ಹೆಚ್ಚಾಗಿ ಪರಿಚಿತರಾಗಿದ್ದು. ನಂತರ ಗಿಚ್ಚಿಗಿಲಿಗಿಲಿ ಸೇರಿದಂತೆ ನಾನಾ ರಿಯಾಲಿಟಿ ಶೋ, ಡ್ಯಾನ್ಸ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇವರು ಮೂಲತಃ ಮೈಸೂರಿನವರು.

ಚಂದನ್​ ಜೊತೆ ಡಿವೋರ್ಸ್

ನಿವೇದಿತಾ ಗೌಡ ಹಾಗೂ ರ್ಯಾಪ್​ ಸಿಂಗರ್​ ಚಂದನ್​ ಶೆಟ್ಟಿ ಪ್ರೀತಿಸಿ 2020ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಕಾರಣಾಂತರಗಳಿಂದ 2024ರಲ್ಲಿ ಡಿವೋರ್ಸ್​ ಪಡೆದುಕೊಂಡಿದ್ದರು. ಅವರ ವಿರುದ್ಧ ಆಗಾಗ್ಗೆ ಕಾಂಟ್ರೋವರ್ಸಿ ಹೇಳಿಕೆ ಟ್ರೋಲ್​ ವ್ಯಕ್ತವಾಗುತ್ತಲೇ ಇರುತ್ತದೆ.

ರಾಜರಾಣಿಯಲ್ಲಿ ಭಾಗಿ

ಚಂದನ್​ ಮತ್ತು ನಿವೇದಿತಾ ಗೌಡ ಅವರು ಮದುವೆಯಾದ ನಂತರ ರಾಜರಾಣಿ ಎನ್ನುವ ದಂಪತಿ ಶೋನಲ್ಲಿ ಭಾಗಿಯಾಗಿ ಹೆಸರು ಗಳಿಸಿದ್ದರು. ನಿವೇದಿತಾ ಗೌಡ ಅವರ ಮುದ್ದೆ ತಿನ್ನುವ ವಿಧಾನ ಎಲ್ಲರನ್ನು ಅಚ್ಚರಿಗೊಳಿಸಿತ್ತು.