ಮಾದಕ ನೋಟ ಬೀರಿದ ನಿಶ್ವಿಕಾ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾದಕ ನೋಟ ಬೀರಿದ ನಿಶ್ವಿಕಾ

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ನಿಶ್ವಿಕಾ ನಾಯ್ಡು ಅವರು ಟೆನಿಸ್​ ಆಡುತ್ತಿರುವಾಗ ಕ್ಯಾಮರಾಗೆ ಪೋಸ್​ ನೀಡಿದ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಬೆಂಗಳೂರು ಬೆಡಗಿ

ನಿಶ್ವಿಕಾ ಅವರು ಹುಟ್ಟಿ ಬೆಳೆದಿದ್ದೆಲ್ಲಾ ನಮ್ಮ ಬೆಂಗಳೂರಿನಲ್ಲೇ. ಇಲ್ಲಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅವರು ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು.

ಅದ್ದೂರಿ ಪದಾರ್ಪಣೆ

2018ರಲ್ಲಿ ತೆರೆಕಂಡ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಆದ್ರೆ, ಇವರು ಮೊದಲು ಸಹಿ ಮಾಡಿದ ಚಿತ್ರ ಅಮ್ಮ ಐ ಲವ್ ಯೂ. ಎರಡೂ ಚಿತ್ರಗಳು ಒಂದೇ ವರ್ಷ ಬಿಡುಗಡೆಯಾಗಿ ಒಳ್ಳೆಯ ಬ್ರೇಕ್ ನೀಡಿದವು.

ವೈವಿಧ್ಯಮಯ ಪಾತ್ರಗಳು

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪಡ್ಡೆಹುಲಿ, ಜಂಟಲ್ಮನ್ ಹಾಗೂ ರಾಮಾರ್ಜುನ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರತಿಭಾವಂತ ನೃತ್ಯಗಾರ್ತಿ

ನಿಶ್ವಿಕಾ ನಾಯ್ಡು ಅವರು ಉತ್ತಮ ನಟಿಯಷ್ಟೇ ಅಲ್ಲದೆ, ಅತ್ಯದ್ಭುತ ನೃತ್ಯಗಾರ್ತಿಯೂ ಹೌದು. ಅವರು ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಇತ್ತೀಚಿನ ಚಿತ್ರಗಳಲ್ಲಿ ಅವರ ಅದ್ಭುತ ಡ್ಯಾನ್ಸ್ ಸ್ಟೆಪ್ಸ್‌ಗಳು ಸಖತ್ ವೈರಲ್ ಆಗುತ್ತಿರುತ್ತವೆ.

ಸೋಶಿಯಲ್ ಮೀಡಿಯಾ ಸೆನ್ಸೇಷನ್

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಿಶ್ವಿಕಾ, ತಮ್ಮ ಹೊಸ ಹೊಸ ಫೋಟೋಶೂಟ್‌ಗಳು, ಫಿಟ್‌ನೆಸ್ ವಿಡಿಯೋಗಳು ಮತ್ತು ಗ್ಲಾಮರಸ್ ಲುಕ್‌ಗಳ ಮೂಲಕ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಟೆನಿಸ್​ ಉಡುಗೆಯಲ್ಲಿ ಹಾಟ್​ ಫೋಸ್​

ಇದೀಗ ನಿಶ್ವಿಕಾ ಅವರು ತಿಳಿ ಗುಲಾಬಿ ಮತ್ತು ಬಿಳಿ ಬಣ್ಣದ ಸ್ಪೋರ್ಟ್​ ಉಡುಪನ್ನು ಧರಿಸಿ, ಟೆನಿಸ್​ ಕೋರ್ಟ್ ಅಂಗಳದಲ್ಲಿ ಕುಳಿತು ಕ್ಯಾಮರಾಗೆ ಆಕರ್ಷಕ ನೋಟ ಬೀರಿದ್ದು, ಫೋಟೋಗಳು ವೈರಲ್​ ಆಗಿವೆ.

ನಿಶ್ವಿಕಾ ಹಾಟ್​ನೆಸ್​ಗೆ ಫಿದಾ

ಫೋಟೋದಲ್ಲಿ ನಿಶ್ವಿಕಾ ಮಾದಕ ನೋಟಕ್ಕೆ ಮರುಳಾಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳ ಮೂಲಕ ಸ್ಯಾಂಡಲ್​ವುಡ್​ ಸುಂದರಿಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ.