'ಲೈಫು ಇಷ್ಟೇನೆ' ನಿಧಿ ಸುಬ್ಬಯ್ಯ

ಮಮತಾ

'ಲೈಫು ಇಷ್ಟೇನೆ' ನಿಧಿ ಸುಬ್ಬಯ್ಯ

ಪಂಚರಂಗಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ನಿಧಿ ಸುಬ್ಬಯ್ಯ ಹಸಿರು ಬಣ್ಣದ ಮಿನಿ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಪೇಸ್​ಬುಕ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಅವರ ಫೋಟೋಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಹಾಟ್​ ಲುಕ್ ಕೊಟ್ಟ ನಿಧಿ

ಸೈಡ್​​ ಕಟೆಡ್​ ಮಿನಿ ಡ್ರೆಸ್, ಕ್ರಿಂಕಲ್ ಟೆಕ್ಸ್ಚರ್ ಇರುವ ಹಗುರವಾದ ಫ್ಯಾಬ್ರಿಕ್, ಡೀಪ್ V-ನೆಕ್ಸ್ಲೀವ್ ಇದ್ದು ಬೀಚ್​ ವಿಯರ್​​ ಬಟ್ಟೆಯೊಂದಿಗೆ ಫೋಟೋ ಶೂಟ್​ ಮಾಡಿಸಿಕೊಂಡಿರುವ ನಟಿ ನಿಧಿ ಸುಬ್ಬಯ್ಯ ಹಾಟ್​ ಲುಕ್​ ಕೊಟ್ಟಿದ್ದಾರೆ.

ನಿಧಿ ಸುಬ್ಬಯ್ಯ ಮನೆ ಮುಂದೆ ಪಟಾಕಿ ಹಚ್ಚಿದ್ದೆ ಎಂದಿದ್ದ ಯಶ್

ಮೈಸೂರಿನಲ್ಲಿ ಓದುವಾಗ ಸಾಕಷ್ಟು ಮೋಜು ಮಸ್ತು ಮಾಡಿರುವುದಾಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಯಶ್​..ಅವರು ಮನೆಯೊಂದರ ಮುಂದೆ ಪಟಾಕಿ ಹಚ್ಚಿದ್ದು, ಆ ಮನೆಯಲ್ಲಿದ್ದ ಹುಡುಗಿ ಈಗ ನಟಿಯಾಗಿದ್ದು, ಅದು ನಿಧಿ ಸುಬ್ಬಯ್ಯನವರೇ ಎಂದು ಹೇಳಿದ್ದರು.

ಬಿಗ್​ಬಾಸ್ ಮಾಜಿ ಸ್ಪರ್ಧಿ

ನಿಧಿ ಸುಬ್ಬಯ್ಯ ಅವರು ಬಿಗ್​ಬಾಸ್​ ಕನ್ನಡದ 8ನೇ ಸೀಸನ್​ನ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಶೋನ ಎರಡನೇ ಇನ್ನಿಂಗ್ಸ್​ನಲ್ಲಿ ಮನೆಯಿಂದ ಆಚೆ ಬಂದಿದ್ದರು. ಈ ಸೀಸನ್​ನಲ್ಲಿ ಅರವಿಂದ್​ ಅವರು ಕಪ್​ ಗೆದ್ದುಕೊಂಡಿದ್ದರು.

ನಿಧಿ ಸುಬ್ಬಯ್ಯ ಅವರ ಸಿನಿಮಾಗಳಿವು

ಕೃಷ್ಣ ನೀ ಲೇಟಾಗಿ ಬಾರೋ, ಕೃಷ್ಣನ ಮ್ಯಾರೇಜ್​ ಸ್ಟೋರಿ, ಪಂಚರಂಗಿ, ಅಣ್ಣ ಬಾಂಡ್​, ವೀರ ಬಾಗು, ಎಡಗೈ ಅಪಘಾತಕ್ಕೆ ಕಾರಣ, ಲೈಫು ಇಷ್ಟೇನೆ, ಆಯುಷ್ಮಾನ್​ ಭವ ಸಿನಿಮಾದಲ್ಲಿ ನಟಿಸಿದ್ದರು.

ಬಾಲಿವುಡ್​ನಲ್ಲಿಯೂ ಮಿಂಚು

ಅಜಾಬ್​ ಗಜಾಬ್​ ಲವ್, ಓ ಮೈ ಗಾಡ್​​, ಡೈರೆಕ್ಟ್​​ ಇಶ್ಕ್​ ಲವ್​ ಶಾಗನ್ ಸಿನಿಮಾದಲ್ಲಿ ನಟಿಸಿದ್ದಾರೆ.