ಸೌಂದರ್ಯ "ನಿಧಿ" ಅಗರ್ವಾಲ್​!

ರಮೇಶ್​ ಕುಮಾರ್​​ ಬಿ ಎಡಮೋಳೆ

ಸೌಂದರ್ಯ "ನಿಧಿ" ಅಗರ್ವಾಲ್​!

ಟಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್ ಅವರು ತಮ್ಮ ಇತ್ತೀಚಿನ ಫೋಟೋಶೂಟ್‌ನಲ್ಲಿ ಸ್ಲೀಕ್ ಕಪ್ಪು ಹಾಲ್ಟರ್-ನೆಕ್ ಡ್ರೆಸ್ ಧರಿಸಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಹಾಟ್​ ಲುಕ್​

ನಿಧಿ ಅವರು ಧರಿಸಿರುವ ಉಡುಗೆಯಲ್ಲಿ ಬೋಲ್ಡ್ ಕಟೌಟ್ ವೇಯ್ಸ್ಟ್​ ಹಾಗೂ ಫಿಟ್ಟೆಡ್ ಮಿಡಿ ಸಿಲೂಯೆಟ್ ವಿಶೇಷ ಆಕರ್ಷಣೆಯಾಗಿದ್ದು, ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಹೀಗಾಗಿ ಕಾಮೆಂಟ್​ಗಳ ಸುರಿಮಳೆಯಾಗುತ್ತಿದೆ.

ನಿಜಕ್ಕೂ ಸೌಂದರ್ಯ ನಿಧಿ

ಅಲೆಅಲೆಯಾದ ಕೇಶವಿನ್ಯಾಸ, ಸ್ಟೇಟ್‌ಮೆಂಟ್ ಹೂಪ್ ಇಯರಿಂಗ್ಸ್, ಡೈಮಂಡ್ ಬ್ರೇಸ್ಲೆಟ್ ಮತ್ತು ಸ್ಟ್ರಾಪಿ ಹಿಲ್ಸ್ ಧರಿಸಿ ತಮ್ಮ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿರುವ ನಿಧಿ ನಿಜಕ್ಕೂ ಸೌಂದರ್ಯ ನಿಧಿಯಂತೆ ಕಂಗೊಳಿಸುತ್ತಿದ್ದಾರೆ.

ಮುಂಬೈ ಬ್ಯೂಟಿ

ನಿಧಿ ಅಗರ್ವಾಲ್ ಮುಂಬೈನಲ್ಲಿ ಜನಿಸಿ ಬೆಳೆದವರಾಗಿದ್ದು, ತಮ್ಮ ನಟನಾ ವೃತ್ತಿಯನ್ನು ಮುಂದುವರಿಸುವ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ಬಹುಭಾಷಾ ನಟಿ

ನಿಧಿ ಅವರು ಹಿಂದಿ, ತೆಲುಗು ಹಾಗೂ ತಮಿಳು ಸೇರಿದಂತೆ ಮುಂತಾದ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ಕೊನೆಯ ಸಿನಿಮಾ

ವೃತ್ತಿಜೀವನಕ್ಕೆ ಬಂದರೆ, ನಿಧಿ ಅಗರ್ವಾಲ್ ಕೊನೆಯದಾಗಿ 'ದಿ ರಾಜಾ ಸಾಬ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

ಮುಂದಿನ ಪ್ರಾಜೆಕ್ಟ್‌ಗಳು

ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರಸ್ ಫೋಟೋಶೂಟ್‌ಗಳ ಮೂಲಕ ಸಕ್ರಿಯರಾಗಿದ್ದರೂ, ಸದ್ಯಕ್ಕೆ ನಿಧಿ ಅವರ ಯಾವುದೇ ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿಲ್ಲ.