ಗ್ಲಾಮರ್​ ಗೊಂಬೆ ನಿಧಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರ್​ ಗೊಂಬೆ ನಿಧಿ

ಜನಪ್ರಿಯ ನಟಿ ನಿಧಿ ಅಗರ್ವಾಲ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ನಿಧಿ ಅವರು ಓರ್ವ ಟಾಲಿವುಡ್ ನಾಯಕಿ. ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು.

ಬ್ಯಾಕ್​ ಟು ಬ್ಯಾಕ್​ ಸಿನಿಮಾ

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬಿಜಿಯಾಗಿರುವ ನಿಧಿ, ತಮ್ಮ ನಟನೆ ಹಾಗೂ ಮಾದಕತೆಯಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಕಳೆದ ವರ್ಷ ಪವನ್ ಕಲ್ಯಾಣ್ ಜೊತೆ ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸಿ ಸುದ್ದಿಯಾದರು.

ಪರಭಾಷಾದಲ್ಲೂ ಬಿಜಿ

ಹರಿಹರ ವೀರಮಲ್ಲು ಚಿತ್ರದಲ್ಲಿ ಪಂಚಮಿ ಪಾತ್ರದ ಮೂಲಕ ನಟಿ ಪ್ರೇಕ್ಷಕರನ್ನು ಮೆಚ್ಚಿಸಿದರು. ಪ್ರಸ್ತುತ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕೊನೆಯದಾಗಿ ರಾಜಾ ಸಾಬ್​ ಸಿನಿಮಾದಲ್ಲಿ ನಟಿಸಿದರು.

ಹಾಟ್​ ಫೋಟೋಸ್​

ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಧಿ, ದಿನಕ್ಕೊಂದು ಗ್ಲಾಮರಸ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

ಎದೆ ಸೀಳು ಕಾಣುವ ಹಾಟ್​ ಫೋಟೋ

ನಿಧಿ ಅವರು ಇತ್ತೀಚೆಗೆ ಎದೆ ಸೀಳು ಕಾಣುವಂತಹ ಚಿನ್ನದ ಬಣ್ಣದ ಉಡುಗೆ ಧರಿಸಿ ಕ್ಯಾಮೆರಾಗೆ ಮಾದಕವಾಗಿ ಪೋಸ್​ ನೀಡಿದ್ದಾರೆ. ತುಂಡುಡುಗೆಯಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.

ಮೈಮಾಟಕ್ಕೆ ಫ್ಯಾನ್ಸ್​ ಫಿದಾ

ವೈರಲ್​ ಫೋಟೋಗಳಲ್ಲಿ ನಿಧಿಯ ಮೈಮಾಟವನ್ನು ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ನಿಮ್ಮ ಸೌಂದರ್ಯವನ್ನು ನೋಡಿ ನಮಗೆ ಹುಚ್ಚು ಹಿಡಿಯುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.