ಮಾಡರ್ನ್​ ಸಿಂಡ್ರೆಲ್ಲಾ ನಿಧಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾಡರ್ನ್​ ಸಿಂಡ್ರೆಲ್ಲಾ ನಿಧಿ!

ಟಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್ ಅವರು ತಮ್ಮ ಇತ್ತೀಚಿನ ಫೋಟೋಶೂಟ್‌ನಲ್ಲಿ ‘ವೈಟ್ ಇಂಡಿಯನ್ ಸಿಂಡ್ರೆಲ್ಲಾ’ ರೀತಿಯಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ರಾಣಿಯಂತಹ ಲುಕ್​

ನಿಧಿ ಅವರು ಧರಿಸಿರುವ ಸುಂದರವಾದ ಐವರಿ ಬಣ್ಣದ (ಆನೆದಂತದ ಬಿಳಿ ಬಣ್ಣ) ಲೆಹಂಗಾಕ್ಕೆ ಹೊಳೆಯುವ ಪಚ್ಚೆ (ಎಮೆರಾಲ್ಡ್) ಹಾರ ಹಾಗೂ ಕಿವಿಯೋಲೆಗಳ ಕಾಂಬಿನೇಷನ್ ರಾಣಿಯ ಕಳೆಯನ್ನು ತಂದಿದೆ.

ನಿಜಕ್ಕೂ ಸೌಂದರ್ಯ ನಿಧಿ

ಮೃದುವಾದ ಮೇಕಪ್, ರೇಷ್ಮೆಯಂತಹ ಕೂದಲು ಮತ್ತು ಆಭರಣಗಳೊಂದಿಗೆ ಮಿಂಚಿರುವ ನಿಧಿ ಯನ್ನು ನೋಡಿದ ಅಭಿಮಾನಿಗಳು ನಿಜಕ್ಕೂ ಸೌಂದರ್ಯ ನಿಧಿ ಅಂತಾನೇ ಕೊಂಡಾಡುತ್ತಿದ್ದಾರೆ.

ಕೊನೆಯ ಸಿನಿಮಾ

ವೃತ್ತಿಜೀವನಕ್ಕೆ ಬಂದರೆ, ನಿಧಿ ಅಗರ್ವಾಲ್ ಕೊನೆಯದಾಗಿ 'ದಿ ರಾಜಾ ಸಾಬ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

ಮುಂದಿನ ಪ್ರಾಜೆಕ್ಟ್‌ಗಳು

ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರಸ್ ಫೋಟೋಶೂಟ್‌ಗಳ ಮೂಲಕ ಸಕ್ರಿಯರಾಗಿದ್ದರೂ, ಸದ್ಯಕ್ಕೆ ನಿಧಿ ಅವರ ಯಾವುದೇ ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿಲ್ಲ.